ಕೋಣಂದೂರು ಸಮೀಪದ ಬಿಲ್ಲೇಶ್ವರದ ಮುಖ್ಯರಸ್ತೆಗೆ ಚಾಚಿಕೊಂಡಿರುವ ಅಕೇಶಿಯಾ ಮರಗಳು
ಮಲೆನಾಡಿನಲ್ಲಿ ಅಕೇಶಿಯಾ ನೀಲಗಿರಿ ಪೈನಸ್ ಮರಗಳನ್ನು ಸಂಪೂರ್ಣ ನಿಷೇಧ ಮಾಡಬೇಕು. ಈ ಮರಗಳು ಮನುಷ್ಯ ಮಾತ್ರವಲ್ಲದೇ ವನ್ಯಜೀವಿಗಳಿಗೂ ಸಂಚಕಾರ ತಂದಿವೆ. ಅಪ್ಪಟ ಮಲೆನಾಡನ್ನು ಬಯಲುಸೀಮೆಯಾಗಿಸಿ ತಾಪಮಾನ ಏರಿಕೆಗೆ ಕಾರಣವಾಗಿದೆ.
ಕೆ.ಪಿ.ಶ್ರೀಪಾಲ್ ನಮ್ಮೂರಿಗೆ ಅಕೇಶಿಯಾ ಬೇಡ ಹೋರಾಟ ಒಕ್ಕೂಟ
15 ವರ್ಷಕ್ಕೊಮ್ಮೆ ಮರಗಳನ್ನು ಕಟಾವು ಮಾಡಲು ಅವಕಾಶ ಇದೆ. ಕೇಂದ್ರ ಸರ್ಕಾರದ ಪೂರ್ವಾನುಮತಿ ಮೇರೆಗೆ ಕಟಾವು ಮಾಡಲಾಗುವುದು. ಅನಾಹುತಕ್ಕೆ ಆಹ್ವಾನ ನೀಡುತ್ತಿರುವ ಮರಗಳನ್ನು ಆದ್ಯತೆಯ ಮೇರೆಗೆ ಕಟಾವು ಮಾಡಲು ಕ್ರಮ ಕೈಗೊಳ್ಳಲಾಗುವುದು.