ಶಿವಮೊಗ್ಗ: ರಾಜ್ಯದಲ್ಲಿ 1700 ಗ್ರಾಮ ಲೆಕ್ಕಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲು ಸಿದ್ಧತೆ ನಡೆಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಯಾ ಜಿಲ್ಲಾಧಿಕಾರಿ ಮೂಲಕವೇ ನೇಮಕಾತಿ ನಡೆದರೂ ಪಾರದರ್ಶಕತೆ ತರಲು ಈ ಪ್ರಕ್ರಿಯೆಗೆ ಕಂದಾಯ ಇಲಾಖೆ ಆಯುಕ್ತರ ನೇತೃತ್ವದಲ್ಲಿ ಏಕರೂಪದ ವ್ಯವಸ್ಥೆ ರೂಪಿಸಲಾಗುತ್ತಿದೆ. ನೇಮಕಾತಿ ಪ್ರಕ್ರಿಯೆ ಮುಂದಿನ ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು.

ಇ–ಆಡಳಿತ ಜಾರಿ: ಕಂದಾಯ ಇಲಾಖೆಯಲ್ಲಿ ಮುಂದಿನ 15 ದಿನಗಳ ಒಳಗಾಗಿ ಇ–ಆಡಳಿತ ಜಾರಿಗೊಳಿಸಲಾಗುತ್ತಿದೆ. ಎಲ್ಲ ಕಡತಗಳು ಡಿಜಿಟಿಲೈಸ್ ಆಗಲಿವೆ. ತಾಲ್ಲೂಕು ಕಚೇರಿಯಿಂದ ಮೇಲ್ಪಟ್ಟ ಎಲ್ಲಾ ಕಡತಗಳು ಇ–ಆಫೀಸ್ ಮೂಲಕವೇ ವಿಲೇವಾರಿ ಆಗಲಿವೆ. ಇದರಿಂದ ಜನರು ವೃಥಾ ಕಚೇರಿಗೆ ಅಲೆಯುವುದು ತಪ್ಪಲಿದೆ ಎಂದರು.

ಸರ್ವೆ ಇಲಾಖೆಯಲ್ಲೂ ಸಿಬ್ಬಂದಿ ಕೊರತೆ ಇದೆ. ಅಲ್ಲಿಗೂ ಮಾನವ ಸಂಪನ್ಮೂಲ ಬೇಕಿದೆ. 2000 ಮಂದಿ ಪರವಾನಗಿ ಪಡೆದ ಸರ್ವೆಯರ್‌ಗಳಿಗೆ ಪರೀಕ್ಷೆ ಮುಗಿಸಲಾಗಿದೆ. ಅವರಿಗೂ ತರಬೇತಿ ಕೊಟ್ಟು ಡಿಸೆಂಬರ್‌ನಿಂದ ಅವರ ಸೇವೆ ಪಡೆದುಕೊಳ್ಳಲಾಗುವುದು. ಅಲ್ಲದೇ 354 ಸರ್ವೆ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆಗೂ ಚಾಲನೆ ನೀಡಲಾಗಿದೆ ಎಂದರು.

ಜಮೀನುಗಳನ್ನು ಡ್ರೋಣ್ ಮೂಲಕ ಸರ್ವೆ ಮಾಡುವ ವ್ಯವಸ್ಥೆಯಲ್ಲಿ ಸಮಸ್ಯೆಗಳು ಕಂಡುಬಂದಿವೆ. ಕೈಯಿಂದ ಸರ್ವೆ ಮಾಡುತ್ತಿದ್ದಾಗ ಕಾಣಸಿಗುತ್ತಿದ್ದ ಲೋಪಗಳೇ ಮತ್ತೆ ಕಂಡುಬರುತ್ತಿವೆ. ದಾಖಲೆಯಲ್ಲಿರುವುದು, ಸರ್ವೆಯಲ್ಲಿ ಕಾಣುತ್ತಿರುವುದು ತಾಳಿಕೆ ಆಗುತ್ತಿಲ್ಲ. ಈ ತೊಂದರೆಗೆ ಪರಿಹಾರ ಕಂಡುಕೊಳ್ಳಲು ಸರ್ವೆ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.