ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾವಿರಕ್ಕೂ ಹೆಚ್ಚು ಎಕರೆ ಅರಣ್ಯ ಒತ್ತುವರಿ: ಶಿವಮೊಗ್ಗದಲ್ಲಿ 24 ಪ್ರಕರಣ ಪತ್ತೆ

ಸ್ವಯಂಪ್ರೇರಿತವಾಗಿ ತೆರವು ನೋಟಿಸ್‌ಗೆ ಸಿದ್ಧತೆ: ಸಿಸಿಎಫ್
Published : 7 ಆಗಸ್ಟ್ 2024, 1:04 IST
Last Updated : 7 ಆಗಸ್ಟ್ 2024, 1:04 IST
ಫಾಲೋ ಮಾಡಿ
Comments
ಸಂತ್ರಸ್ತರ ಪಾಲು ಹೆಚ್ಚು:
‘ಜಿಲ್ಲೆಯಲ್ಲಿ ಅರಣ್ಯ ಅತಿಕ್ರಮಣದಲ್ಲಿ ಶೇ 70ರಷ್ಟು ಭಾಗ ಶರಾವತಿ ಸಂತ್ರಸ್ತರ ಪರ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ಹಾಕಿರುವ ಮಧ್ಯಂತರ ಅರ್ಜಿಯ ವ್ಯಾಪ್ತಿಯೊಳಗೇ ಬರುತ್ತದೆ. ಇದರಲ್ಲಿ 9,000 ಎಕರೆಯನ್ನು ಸಂತ್ರಸ್ತರ ಪರವಾಗಿ ಡಿನೋಟಿಫಿಕೇಶನ್‌ ಮಾಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಕೂಡ ಕಳುಹಿಸಲಾಗಿದೆ. ಇನ್ನು ಅರಣ್ಯಹಕ್ಕು ಕಾಯ್ದೆಯಡಿಯ (ಎಫ್‌ಆರ್‌ಎ) ಅರ್ಜಿಗಳು ಇತ್ಯರ್ಥ ಆಗುವವರೆಗೆ ಹಾಗೂ 3 ಎಕರೆಗಿಂತ ಕಡಿಮೆ ಅತಿಕ್ರಮಣವನ್ನು ಮುಟ್ಟುವುದಿಲ್ಲ. ಆದರೆ 2015ರ ನಂತರ ಆಗಿರುವ ಒತ್ತುವರಿಯನ್ನು ಗುರುತಿಸಿ ತೆರವು ಪ್ರಕ್ರಿಯೆಗೆ ವೇಗ ನೀಡಲಾಗುವುದು’ ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದರು.
ವಿಹಂಗಮ ರೆಸಾರ್ಟ್; ಇಬ್ಬರ ವಿರುದ್ಧ ಪ್ರಕರಣ
ತೀರ್ಥಹಳ್ಳಿ ಬಳಿಯ ಭಾರತೀಪುರ ಕಿರು ಅರಣ್ಯ ಪ್ರದೇಶದ ತುಂಗಾ ನದಿಯ ಬಫರ್ ವಲಯದಲ್ಲಿ ಒತ್ತುವರಿ ಮಾಡಿ ‘ವಿಹಂಗಮ’ ಹೆಸರಿನ ರೆಸಾರ್ಟ್ ನಿರ್ಮಿಸಿ, ಕಲ್ಲು ಕಂಬ, ತಂತಿ ಬೇಲಿ ಹಾಕಿ ಅಡಿಕೆ, ಬಾಳೆ ಬೆಳೆಯುತ್ತಿದ್ದ ಹಾಗೂ ಮನೆ ಇತರೆ ಕಟ್ಟಡಗಳನ್ನು ನಿರ್ಮಿಸಿದ್ದ ಆರೋಪದ ಮೇಲೆ ತೀರ್ಥಹಳ್ಳಿಯ ಕೆ.ಆರ್. ದಯಾನಂದ ಹಾಗೂ ಅವರ ಪುತ್ರ ಕಾನೀನ ಕಡಿದಾಳ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ. ಆಗಸ್ಟ್ 1ರಂದು ತೀರ್ಥಹಳ್ಳಿ ವಲಯ ಅರಣ್ಯಾಧಿಕಾರಿ ಸ್ಥಳ ಪರಿಶೀಲನೆ ಮಾಡಿ ನೀಡಿದ ವರದಿ ಆಧರಿಸಿ ಪ್ರಕರಣ ದಾಖಲಿಸಲಾಗಿದೆ. ರೆಸಾರ್ಟ್ ನಿರ್ಮಾಣಕ್ಕೆ ಅನುಮತಿ ನೀಡಿದ್ದ ಕುಡುಮಲ್ಲಿಗೆ ಗ್ರಾಮ ಪಂಚಾಯಿತಿಯಿಂದ ವರದಿ ಕೇಳಿ ಪಿಡಿಒಗೆ ದಾಖಲೆಗಳನ್ನು ಸಲ್ಲಿಸುವಂತೆ ಹೇಳಲಾಗಿದೆ. ಆರ್‌ಎಫ್‌ಒ ಮನವಿ ಹಿನ್ನೆಲೆಯಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಮಂಗಳವಾರ ಸರ್ವೆ ನಡೆಸಿ ಗಡಿ ಗುರುತಿಸುವ ಕಾರ್ಯ ಕೂಡ ನಡೆದಿದೆ. ನದಿ ದಂಡೆಯಲ್ಲಿ ನಿಯಮಾವಳಿ ಉಲ್ಲಂಘಿಸಿ ರೆಸಾರ್ಟ್ ನಿರ್ಮಿಸಲಾಗಿದೆ ಎಂದು ಬೆಂಗಳೂರಿನ ಎಚ್.ಎಂ. ವೆಂಕಟೇಶ್ ಅವರು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ದೂರು ಸಲ್ಲಿಸಿದ್ದರು. ಸತ್ಯಾಸತ್ಯತೆ ಪರಿಶೀಲನೆಗೆ ಸಚಿವರ ಸೂಚನೆ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಪರಿಶೀಲನೆಗೆ ಮುಂದಾಗಿತ್ತು. ಈ ಬಗ್ಗೆ ‘ಪ್ರಜಾವಾಣಿ’ ಜುಲೈ 26ರಂದು ವರದಿ ಕೂಡ ಪ್ರಕಟಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT