ಆನವಟ್ಟಿ: ‘ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಜಾರಿ ಮಾಡಿರುವ ಐದು ಗ್ಯಾರಂಟಿಗಳು ಪ್ರತಿ ಕುಟುಂಬಕ್ಕೂ ತಲುಪಿವೆ. ಲೋಕಸಭೆ ಚುಣಾವಣೆಗೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪ್ರಕಟಿಸಿರುವ ಐದು ಗ್ಯಾರಂಟಿಗಳನ್ನು ಈಡೇರಿಸುತ್ತದೆ ಎಂಬ ನಂಬಿಕೆ, ವಿಶ್ವಾಸ ಕ್ಷೇತ್ರದ ಮತದಾರರಲ್ಲಿ ಇರುವುದರಿಂದ ನನಗೆ ಗೆಲುವು ಸಿಗುತ್ತದೆ’ ಎಂದು ಶಿವಮೊಗ್ಗ ಕೇತ್ರ ಲೋಕಸಭೆ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿನ ಬಾಲಿಕಾ ಪ್ರೌಢಶಾಲೆಯ ಮತಕೇಂದ್ರದ ಬಳಿ ಭೇಟಿ ನೀಡಿ, ಕಾರ್ಯಕರ್ತರಿಂದ ಮಾಹಿತಿ ಪಡೆದು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

‘ನನ್ನ ತಮ್ಮ ಸೋತಾಗಲೂ, ಗೆದ್ದಾಗಲೂ ಜಿಲ್ಲೆಯ ಜನರ ಜೊತೆಗೆ ಇದ್ದಾನೆ. ನೀರಾವರಿ, ಬಗರ್ಹುಕುಂ ಸಾಗುವಳಿದಾರರ ಪರವಾಗಿ ಪಾದಯಾತ್ರೆ ಮಾಡಿದ್ದಾರೆ. ತಂದೆ ಬಂಗಾರಪ್ಪ ಬಡವರ ಪರವಾಗಿ ಅನೇಕ ಯೋಜನೆಗಳನ್ನು ಜಾರಿ ತಂದಿದ್ದರು. ಕಳೆದ ಚುನಾವಣೆಗಳಲ್ಲಿ ಬಿಜೆಪಿಯ ಭವನಾತ್ಮಕ ಹೇಳಿಕೆಗಳಿಂದ ನಮಗೆ ಸೋಲಾಗಿರಬಹುದು. ಆದರೆ, ಈಗ ಜನರಿಗೆ ಅರ್ಥವಾಗಿದೆ. ನಮ್ಮ ಕುಟುಂಬ ಹಾಗೂ ಕಾಂಗ್ರೆಸ್ ಪಕ್ಷ ಸರ್ವಜನಾಂಗದ ಹಾಗೂ ಸರ್ವಧರ್ಮಗಳ ಪರವಾಗಿದೆ. ಹಾಗಾಗಿ ಕ್ಷೇತ್ರದ ಜನ ನನ್ನ ಕೈಹಿಡಿಯುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡರಾದ ಜರ್ಮಲೆ ಚಂದ್ರಶೆಖರ್, ಮಧುಕೇಶ್ವರ ಪಾಟೀಲ್, ಸುರೇಶ್ ಹಾವಣ್ಣನವರ್, ಸಂಜೀವ ತರಕಾರಿ, ಪಿ. ಹನುಮಂತಪ್ಪ ಹೊಸಳ್ಳಿ, ಅನೀಶ್ ಗೌಡ, ದರ್ಶನ್ ದಚ್ಚು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.