ಶಿವಮೊಗ್ಗ: ಬೆಂಗಳೂರಿನ ಹೆಸರಾಂತ ಸಿ. ಕೃಷ್ಣಯ್ಯ ಚೆಟ್ಟಿ ಅಂಡ್ ಸನ್ಸ್ ಆಭರಣ ಕಂಪೆನಿಯು ಶುಕ್ರವಾರದಿಂದ ಮೂರು ದಿನಗಳ ಕಾಲ ಶಿವಮೊಗ್ಗದ ರಾಯಲ್ ಆರ್ಕಿಡ್ ಹೋಟೆಲ್ ನಲ್ಲಿ ವಜ್ರ, ಪ್ಲಾಟಿನಂ, ಚಿನ್ನ, ಬೆಳ್ಳಿ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಹಮ್ಮಿಕೊಂಡಿದೆ.

ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಪ್ರದರ್ಶನ ಮತ್ತು ಮಾರಾಟಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ‘ಇಂದು ನಕಲಿ ಯುಗ. ಆಭರಣಗಳನ್ನು ಖರೀದಿಸುವಾಗ ಗ್ರಾಹಕರು ಎಚ್ಚರಿಕೆಯಿಂದ ಇರಬೇಕು. ಆದರೆ, ಕೃಷ್ಣಯ್ಯ ಚೆಟ್ಟಿ ಕಂಪನಿಯು ನಂಬಿಕೆಗೆ ಅರ್ಹವಾಗಿದೆ. ಸುಮಾರು 155 ವರ್ಷಗಳಿಂದ ವ್ಯಾಪಾರ ಮಾಡುತ್ತಾ ಬಂದಿದ್ದಾರೆ. ರಾಜರ ಕಾಲದಿಂದ ಇವರ ಪೂರ್ವಜರು ಆಭರಣಗಳ ತಯಾರಿಕೆಯಲ್ಲಿ ಇದ್ದರು. ಶಿವಮೊಗ್ಗದ ಜನರು ಇದರ ಪ್ರಯೋಜನ ಪಡೆಯಬೇಕು ಎಂದರು.

ಕಂಪೆನಿಯ ವ್ಯವಸ್ಥಾಪಕ ಶ್ರೀ ಚರಣ್ ಮಾತನಾಡಿ, 1869ರಿಂದ ನಮ್ಮ ಸಂಸ್ಥೆ ಜನರ ನಂಬಿಕೆಗೆ ಅನುಗುಣವಾಗಿ ಆಭರಣಗಳ ಮಾರಾಟ ಮಾಡುತ್ತಾ ಬಂದಿದೆ. ಶಿವಮೊಗ್ಗದ ಗ್ರಾಹಕರಿಗಾಗಿ ವಿಶೇಷ ರಿಯಾಯಿತಿ ಇದೆ. ಬಂಗಾರಕ್ಕೆ ಶೇ 4, ವಜ್ರಕ್ಕೆ ಶೇ 6, ಬೆಳ್ಳಿಗೆ ಶೇ 2ರಷ್ಟು ರಿಯಾಯಿತಿ ದರ ನೀಡಲಾಗುತ್ತಿದೆ. ₹19 ಲಕ್ಷಕ್ಕಿಂತ ಹೆಚ್ಚಿನ ವಜ್ರದ ಆಭರಣಗಳ ವ್ಯಾಪಾರ ಮಾಡಿದರೆ ಶೇ 9 ರಷ್ಟು ರಿಯಾಯಿತಿ ಸಿಗಲಿದೆ ಎಂದರು.

ಆ. 23ರಿಂದ 25ರವರೆಗೆ ಬೆಳಿಗ್ಗೆ 10.30ರಿಂದ ರಾತ್ರಿ 8 ಗಂಟೆವರೆಗೆ ನಡೆಯುವ ಪ್ರದರ್ಶನ ಮತ್ತು ಮಾರಾಟದಲ್ಲಿ ವಿಶೇಷ ವಿನ್ಯಾಸದ ಆಭರಣ ಕಂಡು ಬಂದವು. ತೋಳಬಂದಿ, ಸೊಂಟದ ಪಟ್ಟಿ, ನೆಕ್ಲೇಸ್, ಉಂಗುರ, ಬಳೆ, ಓಲೆ, ಮೂಗುತಿ, ಜುಮುಕಿ, ಪ್ಲಾಟಿನಂ ಆಭರಣ, ಲಕ್ಷ್ಮೀ, ವೆಂಕಟೇಶ, ರುದ್ರಾಕ್ಷಿ ಮಣಿ ಸೇರಿದಂತೆ ವಿವಿಧ ವಿನ್ಯಾಸದ ಡಾಲರ್, ಪ್ರೀತಿಯ ಸಂಕೇತದ ಡಾಲರ್ ಗಳು ಕಂಡು ಬಂದವು. ₹5 ಸಾವಿರದಿಂದ ₹50 ಲಕ್ಷಕ್ಕೂ ಅಧಿಕ ಮೌಲ್ಯದ ಆಭರಣ, ಅದರ ಜೊತೆಗೆ ಸುಗಂಧ ದ್ರವ್ಯಗಳು, ಮುತ್ತು, ರತ್ನ, ನೀಲ ಮಾಣಿಕ್ಯ, ವೈಢೂರ್ಯ ಇಲ್ಲಿವೆ.

ಕಾರ್ಯಕ್ರಮದಲ್ಲಿ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕಿ ತ್ರಿವೇಣಿ ವಿನೋದ್, ಗೋಪಾಲ್, ಗಣೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.