ಶಿವಮೊಗ್ಗ: ಸಾಗರ ಗ್ರಾಮಾಂತರ ಸಿಪಿಐ ಸುನೀಲ್ ಕುಮಾರ್ ಅವರ ಫೇಸ್‌ಬುಕ್ ಖಾತೆ ಹ್ಯಾಕ್ ಮಾಡಿರುವ ವಂಚಕರು ತುರ್ತು ಆವಶ್ಯಕತೆ ಇದ್ದು, ತಮ್ಮ ಖಾತೆಗೆ ಹಣ ಜಮೆ ಮಾಡಿ ಎಂದು ಬುಧವಾರ ಅವರ ಸ್ನೇಹಿತರಿಗೆ ಸಂದೇಶ ಕಳುಹಿಸಿದ್ದಾರೆ.

ಸಿಪಿಐ ಅವರಿಗೆ ಏನೋ ತುರ್ತು ಇರಬಹುದು ಎಂದು ಕೆಲವರು ಹಣ ಹಾಕಲು ವಿಚಾರಿಸಿದ್ದಾರೆ. ಸಂದೇಶ ಹಿಂದಿಯಲ್ಲಿ ಇದ್ದ ಕಾರಣ ಅನುಮಾನಗೊಂಡ ಹಲವು ಸ್ನೇಹಿತರು ಪರಿಶೀಲಿಸಿದಾಗ ಖಾತೆ ಹ್ಯಾಕ್ ಆಗಿರುವ ಸತ್ಯ ಬಯಲಾಗಿದೆ. ತಕ್ಷಣ ಎಲ್ಲರಿಗೂ ವಾಸ್ತಾವಾಂಶ ತಿಳಿಸಲಾಗಿದೆ.

‘ಫೇಸ್‌ಬುಕ್ ಖಾತೆ ಹ್ಯಾಕ್ ಮಾಡಿ ಹಣದ ಬೇಡಿಕೆಯ ಸಂದೇಶ ಕಳುಹಿಸಿದ್ದಾರೆ ಎಂದು ಇನ್‌ಸ್ಪೆಕ್ಟರ್ ಮಾಹಿತಿ ನೀಡಿದ್ದಾರೆ. ಪ್ರಕರಣ ಪರಿಶೀಲಿಸಲಾಗುತ್ತಿದೆ’ ಎಂದು ಜಿಲ್ಲಾ ಅಪರಾಧ ತನಿಖಾ ವಿಭಾಗದ ಇನ್‌ಸ್ಪೆಕ್ಟರ್ ಕೆ.ಟಿ. ಗುರುರಾಜ್ ಕರ್ಕಿ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.