ಕಳಸವಳ್ಳಿ ತೀರದಲ್ಲಿ ಈಶ್ವರ ಮಲ್ಪೆ ತಂಡದಿಂದ ಗುರುವಾರ ಯುವಕರ ಮೃತದೇಹವನ್ನು ಶೋಧಿಸುತ್ತಿರುವುದು
ರಾಜು
ಹೊಳೆಊಟಕ್ಕೆ ತೆರಳಿ ಮೂವರ ದುರ್ಮರಣ ಪುತ್ರರ ಆಗಲಿಕೆಯ ನೋವಿನಲ್ಲಿ 3 ಕುಟುಂಬಗಳು ನದಿ ತೀರದಲ್ಲಿ ಬೇಕಿದೆ ಅಪಾಯ ಎಚ್ಚರಿಕೆಯ ಫಲಕಗಳು
ಎಚ್ಚರಿಕೆ ಫಲಕ ಆಳವಡಿಸಲು ಆಗ್ರಹ
ನಿತ್ಯ ಸಾವಿರಾರು ಪ್ರವಾಸಿಗರು ಬರುವ ಹೊಳೆಬಾಗಿಲು ಅಂಬಾರಗೊಡ್ಲು ಮುಪ್ಪಾನೆ ಹಸಿರುಮಕ್ಕಿಯಂತಹ ಶರಾವತಿ ಜಲಾನಯನ ಪ್ರದೇಶದ ಹಲವು ಪ್ರದೇಶಗಳಲ್ಲಿ ಯಾವುದೇ ಅಪಾಯದ ಎಚ್ಚರಿಕೆಯ ಫಲಕ ಇಲ್ಲ. ಈ ಹಿಂದೆ ಸಾಕಷ್ಟು ಇಂತಹ ದುರಂತಗಳು ನಡೆದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿಲ್ಲ. ಶರಾವತಿ ನದಿ ಈ ವರ್ಷ ತುಂಬಿದೆ. ಇದರಿಂದ ಕಿರಿದಾದ ಹಾಗೂ ಭಾರಿ ಆಳವನ್ನು ಹೊಂದಿದೆ. ಜನರ ಹಿತದೃಷ್ಟಿಯಿಂದ ಅರಣ್ಯ ಇಲಾಖೆ ಪ್ರವಾಸೋದ್ಯಮ ಇಲಾಖೆ ಜಿಲ್ಲಾಡಳಿತ ಆಪಾಯದ ಮುನ್ಸೂಚನೆ ಬಗ್ಗೆ ಸೂಕ್ತ ಫಲಕ ಆಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.