ತುಮಕೂರು: ನಗರದ ಬಿ.ಎಚ್.ರಸ್ತೆಯ ಸೆಂಚುರಿ ಹೋಂಡಾ ಶೋ ರೂಂನಲ್ಲಿ ಶನಿವಾರ ನಡುರಾತ್ರಿ ಬೆಂಕಿ ಅನಾಹುತ ಸಂಭವಿಸಿದೆ. 65ಕ್ಕೂ ಹೆಚ್ಚು ಬೈಕ್ಗಳು ಭಸ್ಮವಾಗಿವೆ. 15 ಕಂಪ್ಯೂಟರ್ಗಳು, ಪೀಠೋಪಕರಣಗಳು ಆಹುತಿ ಆಗಿವೆ.

ಪ್ರತಿ ವರ್ಷ ದೀಪಾವಳಿ ಹಬ್ಬದ ಸಮಯದಲ್ಲಿ ಪೂಜೆ ನಡೆಸುತ್ತೇವೆ. ರಾತ್ರಿ 10 ರವರೆಗೂ ಪೂಜೆ ನಡೆಸಿದ್ದೆವು. ನಂತರ ದೀಪಗಳನ್ನು ಮನೆಗೆ ತೆಗೆದುಕೊಂಡು ಹೋದೆವು. ಅವಘಡಕ್ಕೆ ನಿಖರ ಕಾರಣ ಗೊತ್ತಿಲ್ಲ ಎಂದು ಶೋ ರೂಂ ಮಾಲೀಕ ಪ್ರವೀಣ್ 'ಪ್ರಜಾವಾಣಿ'ಗೆ ತಿಳಿಸಿದರು.

ದುರ್ಘಟನೆಯಿಂದ ಎರಡೂವರೆ ಕೋಟಿ ನಷ್ಟ ಸಂಭವಿಸಿದೆ ಎಂದು ಪ್ರವೀಣ್ ಹೇಳಿದರು.

ರಾತ್ರಿಯೇ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಆದರೆ ಬೈಕ್ಗಳು ಪೂರ್ಣವಾಗಿ ಭಸ್ಮವಾಗಿವೆ. ಸಮೀಪದಲ್ಲಿಯೇ ಪಟಾಕಿ ಅಂಗಡಿಗಳು ಸಹ ಇದ್ದವು.

ಬೆಂಕಿಯಿಂದ ಸುಟ್ಟು ಕರಕಲಾಗಿರುವ ಅವಶೇಷಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.