ತುಮಕೂರು: ನಗರ ಪ್ರದೇಶದಲ್ಲಿ ಹಬ್ಬದ ಸಮಯದಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗುತ್ತಿವೆ. ಬೀಗ ಹಾಕಿಕೊಂಡು ಮೂರು–ನಾಲ್ಕು ದಿನ ಹೊರಗಡೆ ಹೋಗಿ ವಾಪಸ್ ಬರುವ ಹೊತ್ತಿಗೆ ಮನೆಯ ಮಾಲೀಕರಿಗೆ ಆತಂಕ ಕಾದಿರುತ್ತದೆ.

ಬೆಸ್ಕಾಂ ನಿವೃತ್ತ ಚಾಲಕ ಫಾರೂಕ್ ಪಾಷಾ ಮನೆಯಲ್ಲಿ ದೀಪಾವಳಿ ರಜೆಯ ವೇಳೆ ₹8 ಲಕ್ಷ ನಗದು, 201 ಗ್ರಾಂ ಚಿನ್ನಾಭರಣ ಕಳವಾಗಿದೆ. ನಗರದ ಡಿಎಟಿ ಮಸೀದಿ ಹಿಂಭಾಗದ ರಸ್ತೆಯ ಮನೆಯಲ್ಲಿ ಕಳ್ಳತನವಾಗಿದೆ. ಫಾರೂಕ್ ತಮ್ಮ ಮಕ್ಕಳಿಗೆ ರಜೆ ಇದ್ದದ್ದರಿಂದ ನ. 1ರಂದು ಬೆಳಿಗ್ಗೆ ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಅವರ ಸ್ವಗ್ರಾಮ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಶಿಂಶಾಪುರಕ್ಕೆ ತೆರಳಿದ್ದರು.

ಭಾನುವಾರ ಸಂಜೆ ವಾಪಸ್ ಮನೆಗೆ ಬಂದು ನೋಡಿದಾಗ ಕಳ್ಳತನ ಆಗಿರುವುದು ಗೊತ್ತಾಗಿದೆ. ಮನೆಗೆ ಹಾಕಿದ್ದ ಬೀಗ ಒಡೆದು ಒಳ ನುಗ್ಗಿದ ಕಳ್ಳರು ಬೀರುವಿನಲ್ಲಿದ್ದ ₹8.28 ಲಕ್ಷ ನಗದು, ಚಿನ್ನದ ನೆಕ್ಲೇಸ್, ಉಂಗುರ, ಸರ, ಕಿವಿ ಓಲೆ ಸೇರಿ ಒಟ್ಟು ₹8 ಲಕ್ಷ ಮೌಲ್ಯದ 201 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದಾರೆ. ತಿಲಕ್ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.