ಹುಳಿಯಾರು: ರೈತರು ತಾವು ಬೆಳೆಯುವ ಬೆಳೆಗಳಿಗೆ ಮಾಡುವ ಖರ್ಚನ್ನು ಮಿತಗೊಳಿಸದ ಹೊರೆತು ಕೃಷಿ ಲಾಭದಾಯಕವಾಗಲಾರದು ಎಂದು ಕೃಷಿಕ ಮಹೇಶ್ ತಿಳಿಸದರು.

ಹೋಬಳಿಯ ರಂಗನಕೆರೆ ಗ್ರಾಮದಲ್ಲಿ ಬುಧವಾರ ಕೃಷಿ ತಾಕುಗಳಿಗೆ ಮಧುಗಿರಿ ತಾಲ್ಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳಾ ಸದಸ್ಯರು ಭೇಟಿ ನೀಡಿ ಮಾಹಿತಿ ಪಡೆದರು. ಕೃಷಿಕ ಮಹೇಶ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಧುಗಿರಿ ತಾಲ್ಲೂಕು ಕೃಷಿ ಮೇಲ್ವಿಚಾರಕ ಎಂ.ಭಾನುಪ್ರಕಾಶ್, ಹುಳಿಯಾರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಮೇಲ್ವಿಚಾರಕ ಸಿದ್ಧರಾಜು ಹಾಗೂ ರೈತ ಮಹಿಳೆಯರು ಹಾಜರಿದ್ದರು

ಕೃಷಿ ನಮ್ಮ ಪೂರ್ವಜರ ಕಾಲದಲ್ಲಿ ಲಾಭದಾಯಕವಾಗಿತ್ತು. ಆದರೆ ಇಂದಿನ ಅತಿ ರಾಸಾಯನಿಕ ಔಷಧಿ ಹಾಗೂ ರಸಗೊಬ್ಬರ ಬಳಕೆಯಿಂದ ಕೃಷಿ ಅಧಿಕ ಖರ್ಚು ಬಯಸುತ್ತಿದೆ. ಇದರಿಂದ ಪಾರಾಗಲು ಅರಣ್ಯ ಕೃಷಿ, ಬಹು ಬೆಳೆ ಪದ್ದತಿಯಿಂದ ಲಾಭದಾಯಕವಾಗಲಿದೆ. ಕೃಷಿ ಕುಟುಂಬದ ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ ಎಂಬ ಕೊರಗು ದೂರಾಗಲು ಎಲ್ಲಾ ತಾಯಂದಿರೂ ತಮ್ಮ ಹೆಣ್ಣು ಮಕ್ಕಳನ್ನು ರೈತರ ಮಕ್ಕಳಿಗೆ ಮದುವೆ ಮಾಡಿ ಕೊಡುವ ಮನಸ್ಸು ಮಾಡಬೇಕು. ಮುಂದಿನ ದಿನಗಳಲ್ಲಿ ಕೃಷಿಯೇ ಪ್ರಧಾನವಾಗಲಿದ್ದು ಕೃಷಿ ವಿಮುಖರಾಗದೆ ಯುವಕರು ಹೆಚ್ಚು ಕೃಷಿಯತ್ತ ವಾಲಬೇಕು. ಪೋಷಕರು ತಮ್ಮ ಮಕ್ಕಳು ಕೃಷಿಯಲ್ಲಿ ತೊಡಗಿಸಿ ಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಧುಗಿರಿ ತಾಲ್ಲೂಕು ಕೃಷಿ ಮೇಲ್ವಿಚಾರಕ ಎಂ.ಭಾನುಪ್ರಕಾಶ್, ಹುಳಿಯಾರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಮೇಲ್ವಿಚಾರಕ ಸಿದ್ಧರಾಜು ಹಾಗೂ ರೈತ ಮಹಿಳೆಯರು ಹಾಜರಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.