ತಿಪಟೂರು: ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಈವರೆಗೆ ಎರಡು ದಿನ ನಡೆಯುತ್ತಿದ್ದ ಕೊಬ್ಬರಿ ಹರಾಜು, ಇನ್ನು ಮುಂದೆ ಮೂರು ದಿನಗಳ ಕಾಲ ನಡೆಯಲಿದೆ. ಹರಾಜಿನ ಸಮಯವನ್ನೂ ಬದಲಾವಣೆ ಮಾಡಲಾಗಿದೆ.

ದಶಕಗಳಿಂದ ನಡೆದುಕೊಂಡು ಬಂದಿದ್ದ ಹರಾಜು ವ್ಯವಸ್ಥೆ ಅಕ್ಟೋಬರ್ 1ರಿಂದ ಬದಲಾಗಲಿದೆ. ಮುಂದಿನ ದಿನಗಳಲ್ಲಿ ಸೋಮವಾರ, ಬುಧವಾರ, ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಕೊಬ್ಬರಿ ಹರಾಜು ಮಾಡಲಾಗುತ್ತದೆ. ಈವರೆಗೆ ಬುಧವಾರ, ಶನಿವಾರ ಮಾತ್ರ ಮಧ್ಯಾಹ್ನ 2 ಗಂಟೆಗೆ ಹರಾಜು ಪ್ರಕ್ರಿಯೆ ನಡೆದುಕೊಂಡು ಬಂದಿತ್ತು.

ನಗರದಲ್ಲಿ ಸೋಮವಾರ ಜನಪ್ರತಿನಿಧಿಗಳು, ರೈತ ಮುಖಂಡರು, ವರ್ತಕರು, ಎಪಿಎಂಸಿ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಶಾಸಕ ಕೆ.ಷಡಕ್ಷರಿ, ಎಪಿಎಂಸಿ ಉಪನಿರ್ದೇಶಕ ವಿ.ರಾಜಣ್ಣ, ಹಾಸನ ಉಪನಿರ್ದೇಶಕ ಶ್ರೀಹರಿ, ಚಿತ್ರದುರ್ಗ ಉಪನಿರ್ದೇಶಕ ಎಂ.ಕೃಷ್ಣಪ್ಪ, ಮಂಡ್ಯ ಸಹಾಯಕ ನಿರ್ದೇಶಕಿ ರೇವತಿ ಸಿಂಗ್, ತಿಪಟೂರು ಎಪಿಎಂಸಿ ಕಾರ್ಯದರ್ಶಿ ನ್ಯಾಮೇಗೌಡ, ತುರುವೇಕೆರೆ, ಗುಬ್ಬಿ, ಅರಸೀಕೆರೆ, ಚನ್ನರಾಯಪಟ್ಟಣ, ಹೊಸದುರ್ಗ, ಇತರೆ ಕೆಲವು ತಾಲ್ಲೂಕಿನ ಎಪಿಎಂಸಿ ಕಾರ್ಯದರ್ಶಿಗಳು ಹಾಜರಿದ್ದರು.

ಪ್ರಮುಖ ನಿರ್ಣಯಗಳು:

* ಇನ್ನು ಮುಂದೆ ತಿಪಟೂರು ಮುಖ್ಯ ಮಾರುಕಟ್ಟೆ ಪ್ರಾಂಗಣದ ಗೇಟ್ನಲ್ಲಿ ಕೊಬ್ಬರಿ ವಿವರ ದಾಖಲಿಸುವುದು ಕಡ್ಡಾಯ.

* ಎಲ್ಲ ಖರೀದಿದಾರರು ಬೇಡಿಕೆಗೆ ತಕ್ಕಂತೆ ಧಾರಣೆ ನಮೂದಿಸಬೇಕು. ಮಾರುಕಟ್ಟೆ ವ್ಯವಸ್ಥೆಯನ್ನು ಹಾಳು ಮಾಡಲು ಉದ್ದೇಶಪೂರ್ವಕವಾಗಿ ಟೆಂಡರ್ನಲ್ಲಿ ಅಸಮಾನ್ಯ ಧಾರಣೆ ನಮೂದಿಸಿದರೆ ಅಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದು. ಲೈಸೆನ್ಸ್ ಅಮಾನತು ಅಥವಾ ರದ್ದುಪಡಿಸುವುದು.

* ದಲ್ಲಾಲರು ತಮ್ಮ ಅಂಗಡಿಗಳಲ್ಲಿ ಘೋಷಣೆಯಾಗುವ ಅತಿ ಹೆಚ್ಚಿನ ಟೆಂಡರ್ ಧಾರಣೆಯನ್ನು ರೈತರಿಗೆ ಪಾವತಿಸುವುದು. ದಲ್ಲಾಲರು ತಮ್ಮ ಅಂಗಡಿಗೆ ಟೆಂಡರ್ ನಮೂದಿಸುವಂತೆ ಹೆಚ್ಚಿನ ಸಂಖ್ಯೆಯ ಖರೀದಿದಾರರನ್ನು ಉತ್ತೇಜಿಸುವುದು.

* ದಲ್ಲಾಲರ ಅಂಗಡಿಯಲ್ಲಿ ರೈತರು ಕೊಬ್ಬರಿ ತೂಕ ಮಾಡಿಸಿ ದಾಸ್ತಾನು ಮಾಡುವಂತಿಲ್ಲ. ರೈತರು ತಂದ ಕೊಬ್ಬರಿಯನ್ನು ಗರಿಷ್ಠ ಮೂರು ಟೆಂಡರ್ ಆಗುವವರೆಗೆ ಮಾತ್ರ ದಲ್ಲಾಲರ ಅಂಗಡಿಗಳಲ್ಲಿ ಇಡಬಹುದು. ಹಾಗೇ ಮುಂದುವರಿದರೆ ಅಂತಹ ದಲ್ಲಾಲರ ಮೇಲೆ ಕ್ರಮ ವಹಿಸಲಾಗುವುದು.

* ಖರೀದಿದಾರರು ಕನಿಷ್ಠ 5 ದಲ್ಲಾಲರ ಅಂಗಡಿಗಳಲ್ಲಿ ಟೆಂಡರ್ ನಮೂದಿಸಬೇಕು. ಅಂತಹ ಅಂಗಡಿಗಳಲ್ಲಿ ಖರೀದಿದಾರರು ಟೆಂಡರ್ಗಿಟ್ಟ ಎಲ್ಲ ಕೊಬ್ಬರಿಗೂ ಬೆಲೆ ನಮೂದಿಸುವುದು ಕಡ್ಡಾಯ.

* ಖರೀದಿದಾರರು ಮೂರು ತಿಂಗಳ ವರೆಗೆ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸದಿದ್ದರೆ ಅಂತಹ ಖರೀದಿದಾರರಿಗೆ ಕಾರಣ ಕೇಳಿ ನೋಟಿಸ್ ನೀಡುವುದು. ಸೂಕ್ತ ಕಾನೂನು ಕ್ರಮ ಜರುಗಿಸುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.