ತುಮಕೂರು: ಇದೇ ಮೊದಲ ಬಾರಿಗೆ ಜಿಲ್ಲಾ ಆಡಳಿತ ಏರ್ಪಡಿಸಿದ್ದ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ಥಳೀಯ ಕಲಾವಿದರು ಹಾಗೂ ಕಲಾ ತಂಡಗಳಿಗೆ ಈವರೆಗೂ ಸಂಭಾವನೆಯನ್ನೇ ಬಿಡುಗಡೆ ಮಾಡಿಲ್ಲ.

‘ದಸರಾ ಆಚರಣೆ ಅದ್ದೂರಿಯಾಗಿ ನಡೆಯಬೇಕು. ಯಾವುದಕ್ಕೂ ಕೊರತೆಯಾಗಬಾರದು. ಸ್ಥಳೀಯ ಕಲಾವಿದರನ್ನು ಬಳಸಿಕೊಂಡು ಕಾರ್ಯಕ್ರಮಕ್ಕೆ ಮೆರುಗು ನೀಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಹಾಗೂ ಜಿಲ್ಲಾ ಆಡಳಿತ ಹೇಳಿತ್ತು.

ಜಿಲ್ಲಾ ಆಡಳಿತದ ಕಾರ್ಯಕ್ರಮವಾದ ಕಾರಣ ಕಲಾವಿದರು ಹಾಗೂ ಕಲಾ ತಂಡಗಳು ಸಹ ಉತ್ಸಾಹದಿಂದ ಭಾಗವಹಿಸಿದ್ದವು. ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಆದರೆ ದಸರಾ ಮುಗಿದು ಒಂದು ತಿಂಗಳು ಕಳೆದರೂ ಕಲಾವಿದರಿಗೆ ಸಂಭಾವನೆ ನೀಡಲು ಜಿಲ್ಲಾ ಆಡಳಿತ ಮನಸ್ಸು ಮಾಡಿಲ್ಲ.

ಯುವ ದಸರಾದಲ್ಲಿ ಭಾಗವಹಿಸಿದ್ದ 16 ತಂಡಗಳ ಸಂಭಾವನೆ ₹5 ಲಕ್ಷ, ಧಾರ್ಮಿಕ ವಿಧಿವಿಧಾನದ 27 ತಂಡಗಳಿಗೆ ₹5 ಲಕ್ಷ, ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ 25 ತಂಡಗಳ ₹5 ಲಕ್ಷ, ಮುಖ್ಯ ವೇದಿಕೆಯಲ್ಲಿ ಪ್ರದರ್ಶನ ನೀಡಿದ 4 ತಂಡಗಳಿಗೆ ₹2 ಲಕ್ಷ ನೀಡಬೇಕಿದೆ. ಒಟ್ಟು 71 ಕಲಾ ತಂಡಗಳಿಗೆ ₹17 ಲಕ್ಷ ಸಂಭಾವನೆಯನ್ನು ಜಿಲ್ಲಾಡಳಿತ ಕೊಡಬೇಕಿದೆ.

ಭಾಗವಹಿಸಿದ್ದ ಕಲಾವಿದರಿಗೆ ಕನಿಷ್ಠ ಪ್ರಶಸ್ತಿ ಪತ್ರವನ್ನು ನೀಡಿಲ್ಲ. ಸುಮಾರು 1,550ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಂಡಿದ್ದು, ಸಂಭಾವನೆ ಪಡೆದುಕೊಳ್ಳಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಗೆ ಅಲೆಯುತ್ತಿದ್ದಾರೆ.

ಸಂಭಾವನೆಗೆ ಪರದಾಟ

ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚಲನಚಿತ್ರ ನಟರು ಇತರೆ ಕಲಾವಿದರ ತಂಡಕ್ಕೆ ₹15 ಲಕ್ಷ ಸಂಭಾವನೆಯನ್ನು ಈಗಾಗಲೇ ಜಿಲ್ಲಾ ಆಡಳಿತ ನೀಡಿದೆ. ಆದರೆ ಗ್ರಾಮೀಣ ಭಾಗದ ಕಲಾವಿದರನ್ನು ನಿರ್ಲಕ್ಷ್ಯಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ₹1 ಕೋಟಿ ಅನುದಾನ ಬಿಡುಗಡೆಯಾಗಿದ್ದರೂ ಕಲಾವಿದರ ಸಂಭಾವನೆ ಬಿಡುಗಡೆ ಮಾಡಲು ಗಮನ ಹರಿಸಿಲ್ಲ. ಜಿಲ್ಲಾ ಆಡಳಿತ ಗಮನ ಹರಿಸಿ ತಕ್ಷಣ ಸಂಭಾವನೆ ನೀಡದಿದ್ದರೆ ಕಲಾವಿದರ ಜತೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು. ವೀರೇಶ್ ಪ್ರಸಾದ್ ಅಧ್ಯಕ್ಷ ಕರ್ನಾಟಕ ಸಾಂಸ್ಕೃತಿಕ ಸಂಘಟನೆಗಳ ರಾಜ್ಯ ಮಹಾ ಒಕ್ಕೂಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.