ತುರುವೇಕೆರೆ: ರೈತರ ದುಡಿಮೆಯೇ ದೇಶದ ಆರ್ಥಿಕ ಅಭಿವೃದ್ಧಿಯ ಮೂಲ ಬೇರುಗಳು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಮಾಯಸಂದ್ರ ಹೋಬಳಿ ಬ್ಯಾಲಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದ ಉಡಸಲಮ್ಮ(ಮಾರಮ್ಮ) ದೇವಾಲಯ ಪ್ರವೇಶ ಸ್ಥಿರ ಬಿಂದ ಪ್ರತಿಷ್ಠಾಪನಾ ಮತ್ತು ವಿಮಾನ ಗೋಪುರ ಕಳಸ ಪ್ರತಿಷ್ಠಾಪನಾ ಹಾಗೂ ಮಹಾಕುಂಬಾಭಿಷೇಕದಲ್ಲಿ ಮಾತನಾಡಿದರು.

ಯಾವುದೇ ಮರಗಳು ಗಟ್ಟಿಯಾಗಿ ನಿಲ್ಲಲು ಸದೃಢ ಬೆಳೆಯಲು ಬೇರುಗಳೇ ಮುಖ್ಯ ಆಧಾರ. ಆದರೆ ಮರದ ಬೇರಿನ ಸೇವೆಯನ್ನು ಯಾರೂ ಸಹ ನೆನಪಿಸಿಕೊಳ್ಳುವುದಿಲ್ಲ. ಕೈಗಾರಿಕೆಗಳು ಸಹ ರೈತರು ಉತ್ಪಾದಿಸುವ ವಸ್ತುಗಳ ಮೇಲೆ ಅವಲಂಬಿತವಾಗಿವೆ. ರೈತರು ತಮ್ಮ ನಿತ್ಯದ ಕಾಯಕದ ಜೊತಗೆ ದೇವರ ಪೂಜೆ, ಧಾರ್ಮಿಕ ಕಾರ್ಯವನ್ನು ಮರೆಯುವುದಿಲ್ಲ ಆದ್ದರಿಂದಲೇ ಹಳ್ಳಿಗಳಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಿದೆ ಎಂದರು.

ಚಿತ್ರದುರ್ಗ ಮಠದ ಪೀಠಾಧ್ಯಕ್ಷ ಕೃಷ್ಣಯಾದವಾನಂದ ಸ್ವಾಮೀಜಿ ಮಾತನಾಡಿ, ‘ದೇವಾಲಯಗಳು ಇಲ್ಲದಿದ್ದರೆ ಇಲ್ಲಿ ನಾವು– ನೀವು ಯಾರೂ ಸೇರುತ್ತಿರಲಿಲ್ಲ. ಜನರು ಭಕ್ತಿ ಭಾವದಿಂದ ಸೇರುವುದು ದೇವಾಲಯದಲ್ಲಿ ಮಾತ್ರ. ಹಿಂದೂ ಸಮಾಜದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದೆ. ಹಣ್ಣು ಕಾಯಿ, ಬಾಳೆ ಹಣ್ಣು ಇಟ್ಟು ಪೂಜೆ ಮಾಡದೆ ಗ್ರಾಮದ ದೇವಾಲಯದಲ್ಲಿ ಸಂಜೆ, ಬೆಳಿಗ್ಗೆ ಕುಳಿತು ದೇವರ ಸೋತ್ರದೊಂದಿಗೆ ಪ್ರಾರ್ಥನೆ ಮಾಡುವುದನ್ನು ರೂಡಿಸಿಕೊಳ್ಳಬೇಕಿದೆ. ಇಂತಹ ಸಂಸ್ಕಾರವನ್ನು ಮಕ್ಕಳಿಗೆ ಕಲಿಸಬೇಕು ಎಂದರು.

ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಈ ಭಾಗದಲ್ಲಿ ಎಲ್ಲ ಕೆರೆ ಕಟ್ಟೆಗಳನ್ನು ಹೇಮಾವತಿ ನೀರು ಹರಿಸಿ ತುಂಬಿಸಲಾಗಿದೆ. ಕೆರೆ– ಕಟ್ಟೆ ತುಂಬಿದರೆ ರೈತರು ಸಂತೋಷವಾಗಿ ದೇವರ ಕಾರ್ಯ ಮಾಡುತ್ತಾರೆ. ದೇವಾಲಯ ಆವರಣದಲ್ಲಿ ಸಮುದಾಯ ಭವನ ಅವಶ್ಯಕತೆ ಇದ್ದು ಸಮುದಾಯ ಭವನ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎನ್.ಆರ್.ಜಯರಾಮ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಕೆ.ಸೋಮಶೇಖರ್, ಗ್ರಾಮ ಪಂಚಾಯಿತಿ ಸದಸ್ಯ ಸತೀಶ್, ದೇವಾಲಯ ಸಮಿತಿ ಅಧ್ಯಕ್ಷ ವಿ.ಎನ್. ಹನುಮಂತಯ್ಯ, ಅಂಗಡಿಗೆರೆ ರಾಮಣ್ಣ, ಸಿ.ಬಿ.ಶಂಕರ್, ಶಿವಣ್ಣ, ಡೆಲ್ಲಿತಿಮಯ್ಯ, ಗಂಗಣ್ಣ, ಶಿವಕುಮಾರ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.