ಶಿರಾ: ಪ್ರಯಾಣಿಕರು ಬಸ್‌ನಲ್ಲಿ ಬಿಟ್ಟು ಹೋಗಿದ್ದ ಸುಮಾರು ₹ 6.20 ಲಕ್ಷ ಮೌಲ್ಯದ ಚಿನ್ನದ ಆಭರಣಗಳನ್ನು ಮರಳಿ ನೀಡುವ ಮೂಲಕ ಕೆಎಸ್ಆರ್‌ಟಿಸಿ ಬಸ್ ನಿರ್ವಾಹಕ ಶ್ರೀಧರ್ ಪ್ರಮಾಣಿಕತೆಮೆರೆದಿದ್ದಾರೆ.

ಶಿರಾ ಡಿಪೊಗೆ ಸೇರಿದ ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಪಾವಗಡ ಪಟ್ಟಣದ ನಾಗಲತಾ ಎಂಬುವವರು ಸೋಮವಾರ ಪಾವಗಡದಿಂದ ಬೆಂಗಳೂರಿಗೆ ಪ್ರಯಾಣ ಮಾಡುವಾಗ ಬ್ಯಾಗನ್ನು ಬಸ್‌ನಲ್ಲೇ ಬಿಟ್ಟು ಹೋಗಿದ್ದರು.

ಬಸ್‌ನಿಂದ ಇಳಿದು ಹೋದ ನಂತರ ನಾಗಲತಾಗೆ ಬ್ಯಾಗ್ ಬಿಟ್ಟು ಬಂದಿರುವುದು ಗಮನಕ್ಕೆ ಬಂದಿದೆ. ಜೊತೆಗೆ ಬ್ಯಾಗಿನಲ್ಲಿ ಚಿನ್ನದ ಆಭರಣಗಳು ಇರುವುದರಿಂದ ಆತಂಕಕ್ಕೆ ಒಳಗಾಗಿ ಶಿರಾ ಡಿಪೋಗೆ ಕರೆ ಮಾಡಿ ತಿಳಿಸಿದ್ದಾರೆ. ಡಿಪೋ ಸಿಬ್ಬಂದಿ ನಿರ್ವಾಹಕನ ಜೊತೆ ಮಾತನಾಡಿ ಬಸ್‌ಗಳಲ್ಲಿ ಬ್ಯಾಗ್ ಇರುವುದನ್ನು ಖಚಿತ ಪಡಿಸಿಕೊಂಡು ಮಂಗಳವಾರ ಶಿರಾಕ್ಕೆ ಬಂದು ಬ್ಯಾಗ್ ತೆಗೆದುಕೊಂಡು ಹೋಗುವಂತೆ ಸೂಚಿಸಿದರು.

ಮಂಗಳವಾರ ಶಿರಾಕ್ಕೆ ಬಂದ ನಾಗಲತಾ ತಮ್ಮ ಬ್ಯಾಗನ್ನು ಪಡೆದುಕೊಂಡರು. ನಿರ್ವಾಹಕ ಶ್ರೀಧರ್ ಅವರ ಪ್ರಾಮಾಣಿಕತೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.