ತುಮಕೂರು: ನಿಯಮ ಬಾಹಿರವಾಗಿ ನರೇಗಾ ಅನುದಾನ ಪಾವತಿಸಿದ ಆರೋಪದ ಮೇರೆಗೆ ಗುಬ್ಬಿ ತಾಲ್ಲೂಕು ಹಾಗಲವಾಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಎಸ್.ಎಚ್.ಶಿವಕುಮಾರ್ ಅವರನ್ನು ಅಮಾನತುಗೊಳಿಸಿ ಜಿ.ಪಂ ಸಿಇಒ ಜಿ.ಪ್ರಭು ಆದೇಶಿಸಿದ್ದಾರೆ.

ಇಲಾಖೆ ವಿಚಾರಣೆ ಬಾಕಿ ಇರಿಸಿ, ತಕ್ಷಣದಿಂದ ಅಮಾನತುಗೊಳಿಸಿ ಆದೇಶಿಸಲಾಗಿದೆ.

‘ನರೇಗಾ ಯೋಜನೆಯಡಿ ಜಲ್ಲಿ ರಸ್ತೆ ಕಾಮಗಾರಿ, ಅಮೃತ ಸರೋವರ ನಿರ್ಮಾಣ, ಕೆರೆ ಅಭಿವೃದ್ಧಿ ಕಾಮಗಾರಿ ಸೇರಿದಂತೆ ಮತ್ತಿತರ ಕಾಮಗಾರಿಗಳನ್ನು ಅನುಷ್ಠಾನಗೊಳಿಸದೆ ನಿಯಮ ಬಾಹಿರವಾಗಿ, ಮಾರ್ಗಸೂಚಿ ಉಲ್ಲಂಘಿಸಿ ಕೂಲಿ ಮೊತ್ತ ಪಾವತಿಸಿದ್ದಾರೆ. ಸರ್ಕಾರಿ ಅನುದಾನ ದುರುಪಯೋಗ ಪಡಿಸಿಕೊಂಡಿದ್ದಾರೆ. ನರೇಗಾ ಪರಿಣಾಮಕಾರಿ ಅನುಷ್ಠಾನದಲ್ಲಿ ವಿಫಲರಾಗಿದ್ದಾರೆ’ ಎಂದು ಗುಬ್ಬಿ ತಾ.ಪಂ ಇಒ ವರದಿ ಸಲ್ಲಿಸಿದ್ದರು.

ಕಾಮಗಾರಿ ಕಡತ, ದಾಖಲೆ ಸರಿಯಾಗಿ ನಿರ್ವಹಿಸಿಲ್ಲ. ಅಳತೆ ಪುಸ್ತಕ ದಾಖಲಿಸಿದೆ, ನರೇಗಾ ಯೋಜನೆಯ ನಿಯಮ ಪಾಲಿಸದೆ ಸಾಮಗ್ರಿ ಮತ್ತು ಕೂಲಿ ಹಣ ಪಾವತಿಸಿದ್ದಾರೆ. ಕಾಮಗಾರಿ ಅನುಷ್ಠಾನಗೊಳಿಸದೆ ಬಿಲ್ ಮಾಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.