ತುಮಕೂರು: ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಯೋಜನೆ ರದ್ದು ಪಡಿಸಿ, ಇದಕ್ಕೆ ಮೀಸಲಿಟ್ಟಿದ್ದ ಹಣದಲ್ಲಿ ಹೇಮಾವತಿ ನಾಲೆಯ ಬಾಕಿ ಕಾಮಗಾರಿ ಪೂರ್ಣಗೊಳಿಸುವಂತೆ ಮಾಜಿ ಸಚಿವ ಸೊಗಡು ಶಿವಣ್ಣ ಇಲ್ಲಿ ಶನಿವಾರ ಒತ್ತಾಯಿಸಿದರು.

ಹೇಮಾವತಿಯಿಂದ ಜಿಲ್ಲೆಗೆ ನಿಗದಿಯಾಗಿರುವ 25.32 ಟಿಎಂಸಿ ಅಡಿ ನೀರು ಇದುವರೆಗೆ ಹರಿಸಿಲ್ಲ. ಜಿಲ್ಲೆಯ ಪಾಲಿನ ನೀರು ಪಡೆಯಲು ನಮಗೂ ಒಂದು ಎಕ್ಸ್ಪ್ರೆಸ್ ಕೆನಾಲ್ನ ಅವಶ್ಯಕತೆ ಇದೆ. ರಾಜಕೀಯ ಪ್ರೇರಿತವಾದ, ತಾಂತ್ರಿಕವಾಗಿ ಕಾರ್ಯಸಾಧುವಲ್ಲದ, ಅನಗತ್ಯ ಲಿಂಕ್ ಕೆನಾಲ್ ಕಾಮಗಾರಿ ನಿಲ್ಲಿಸಬೇಕು. ಇಲ್ಲದಿದ್ದರೆ ನ್ಯಾಯಾಲಯದ ಮುಖಾಂತರ ಕಾನೂನಾತ್ಮಕವಾಗಿ ಹೋರಾಟ ರೂಪಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

ತುರುವೇಕೆರೆ, ಗುಬ್ಬಿ ಭಾಗದ ರೈತರ ಜಮೀನು, ರಸ್ತೆ ಮುಖಾಂತರ ಪೈಪ್ಲೈನ್ ಹಾದು ಹೋಗುತ್ತಿದ್ದು, ಭೂ ಸ್ವಾಧೀನ ಪ್ರಕ್ರಿಯೆ ಕಾನೂನು ಪ್ರಕಾರ ಆಗಿಲ್ಲ. ಅಧಿಕಾರಿಗಳು, ಗುತ್ತಿಗೆದಾರರು ದಬ್ಬಾಳಿಕೆಯಿಂದ ರೈತರ ಜಮೀನುಗಳಿಗೆ ಅನಧಿಕೃತವಾಗಿ ಪ್ರವೇಶ ಮಾಡಿ, ಅಡಿಕೆ, ತೆಂಗು ಮರ ಕಡಿದು ಹಾಕಿದ್ದಾರೆ. ರಸ್ತೆ ಅಗೆದು ಸಾರ್ವಜನಿಕರಿಗೆ ತೊಂದರೆ ನೀಡುತ್ತಾರೆ ಎಂದು ಆರೋಪಿಸಿದರು.

ಕುಣಿಗಲ್ಗೆ ನಿಗದಿಪಡಿಸಿದ ನೀರನ್ನು ಈಗಿರುವ ನಾಲೆ ಮುಖಾಂತರ ಹರಿಸಲಾಗುತ್ತಿದೆ. ಇಂತಹ ಸಮಯದಲ್ಲಿ ಅನಗತ್ಯವಾಗಿ ₹986 ಕೋಟಿ ವೆಚ್ಚದಲ್ಲಿ ಎಕ್ಸ್ಪ್ರೆಸ್ ಕೆನಾಲ್ ಕಾಮಗಾರಿ ನಡೆಸುತ್ತಿರುವುದು ಏಕೆ? ಇದು ಸಾರ್ವಜನಿಕರ ತೆರಿಗೆ ಹಣ ಲೂಟಿ ಮಾಡುವ ಉದ್ದೇಶವೇ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.