ತೋವಿನಕೆರೆ: ವರ್ಕ್ಷಾಪ್ನಲ್ಲಿ ಸಿದ್ಧಪಡಿಸುವ ಸೈಕಲ್ ಚಕ್ರದ ಕಬ್ಬಿಣ್ಣದ ಕುಂಟೆ ರೈತರಿಗೆ ವರದಾನವಾಗಿದೆ.

ತೋವಿನಕೆರೆಯಲ್ಲಿರುವ ಎರಡು ವರ್ಕ್ಷಾಪ್ಗಳಲ್ಲಿ ಒಂದು ತಿಂಗಳಿನಿಂದ ಸೈಕಲ್ ಚಕ್ರ ಉಪಯೋಗಿಸಿ ಕಬ್ಬಿಣದ ಕುಂಟೆಗಳನ್ನು ತಯಾರಿಸುತ್ತಿದ್ದಾರೆ.

ರಾಗಿ, ಹೂವಿನ ತಾಕುಗಳಲ್ಲಿ ಬೆಳೆಯುವ ಕಳೆಗಳನ್ನು ಸೈಕಲ್ ಚಕ್ರದ ಕುಂಟೆಯನ್ನು ಒಬ್ಬ ವ್ಯಕ್ತಿ ಸಾಲುಗಳಲ್ಲಿ ನೂಕಿಕೊಂಡು ಸುಲಭವಾಗಿ ತೆಗೆಯಬಹುದು. ರಾಸುಗಳ ಕೊರತೆಯಿಂದ ಮರದ ಕುಂಟೆ ಮೂಲಕ ಕಳೆ ತೆಗೆಯುವುದು ಕಷ್ಟ ಮತ್ತು ಹೆಚ್ಚಿನ ಖರ್ಚು ಬರುತ್ತದೆ. ದನಗಳ ಕುಂಟೆಯಲ್ಲಿ ಅಚ್ಚುಕಟ್ಟಾಗಿ ಕಳೆ ತೆಗೆಯಬಹುದು. ಎತ್ತುಗಳು ಇಲ್ಲದೇ ಇರುವುದರಿಂದ ರೈತರು ಇದರ ಹಿಂದೆ ಬಿದ್ದಿದ್ದಾರೆ ಎನ್ನುತ್ತಾರೆ ಸಿ.ಎಸ್.ಜಿ. ಪಾಳ್ಯದ ರೈತ ನಾರಾಯಣಪ್ಪ.

‘ಈ ವರ್ಷ ಈಗಾಗಲೇ 50ಕ್ಕೂ ಹೆಚ್ಚು ಸೈಕಲ್ ಚಕ್ರದ ಕುಂಟೆಗಳನ್ನು ₹ 1,400ಗೆ ಒಂದರಂತೆ ಮಾರಾಟ ಮಾಡಿದ್ದೇನೆ. ಸಿದ್ದಪಡಿಸಿದ ತಕ್ಷಣ ಮಾರಾಟವಾಗುತ್ತಿವೆ’ ಎನ್ನುತ್ತಾರೆ ವರ್ಕಷಾಪ್ ಮಾಲೀಕ ಜಾಬೀರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.