ತುಮಕೂರು: ‘ಕನ್ನಡದ ನೆಲ, ಜಲ ಸಮೃದ್ಧವಾದದ್ದು. ಕನ್ನಡ ನಮ್ಮ ಅನ್ನದ ಭಾಷೆ. ಭಾಷೆಯೊಂದಿಗೆ ಭಾವನಾತ್ಮಕ ಸಂಬಂಧ ಇಲ್ಲದಿದ್ದರೆ ನಾವು ಜಡವಾಗಿ ಬಿಡುತ್ತೇವೆ’ ಎಂದು ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಅಧ್ಯಕ್ಷ ಮುರಳಿಕೃಷ್ಣಪ್ಪ ಹೇಳಿದರು.

ನಗರದಲ್ಲಿ ಶನಿವಾರ ಶೈನಾ ಅಧ್ಯಯನ ಸಂಸ್ಥೆ, ಪ್ರಗತಿ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಜಿಲ್ಲಾ ಮಹಿಳಾ ಸಂಘಟನೆಯಿಂದ ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಲೇಖಕಿ ಬಿ.ಸಿ.ಶೈಲಾ ನಾಗರಾಜ್, ‘ಕನ್ನಡದ ಅಸ್ಮಿತೆ ಉಳಿಸಲು ನಮ್ಮ ಹೋರಾಟ ಬಲಗೊಳ್ಳಬೇಕಿದೆ. ಸಾಮಾನ್ಯ ಜನ ಕನ್ನಡ ಉಳಿಸಲು ಸದಾ ಸನ್ನದ್ಧರಾಗಿರುತ್ತಾರೆ. ವಿದ್ಯಾವಂತರು ಕನ್ನಡ ಉಳಿಸಿ ಬೆಳೆಸಬೇಕು’ ಎಂದರು.

ಮೆರವಣಿಗೆಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಚಾಲನೆ ನೀಡಿದರು. ಬಡಾವಣೆ ಮುಖಂಡರಾದ ರೂಪಾ ಅನಿಲ್ಕುಮಾರ್, ಎ.ಎಂ.ಶರ್ಮಾ, ಟಿ.ಎಸ್.ಆಂಜನಪ್ಪ, ದೇವಪ್ರಕಾಶ್, ಕೆ.ಟಿ.ಮಂಜುನಾಥ್, ಸಿ.ಚಂದ್ರಯ್ಯ, ದೊಂಬರನಹಳ್ಳಿ ನಾಗರಾಜ್, ಪ್ರವೀಣಾ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.