ಬುಧವಾರ, 2 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಾತ್ಮ ಗಾಂಧೀಜಿ ಬದುಕು ವಿಶ್ವವಿದ್ಯಾಲಯ: ಶಾಸಕ ಟಿ.ಬಿ.ಜಯಚಂದ್ರ

Published : 2 ಅಕ್ಟೋಬರ್ 2024, 14:20 IST
Last Updated : 2 ಅಕ್ಟೋಬರ್ 2024, 14:20 IST
ಫಾಲೋ ಮಾಡಿ
Comments

ಶಿರಾ: ಮಹಾತ್ಮ ಗಾಂಧೀಜಿ ಅವರ ಬದುಕು ಒಂದು ವಿಶ್ವವಿದ್ಯಾಲಯವಾಗಿದ್ದು, ಸಂಶೋಧನೆಗೆ ಆರ್ಹವಾಗಿದೆ. ಇಂತಹ ವ್ಯಕ್ತಿಯ ಜೀವನ  ಆದರ್ಶವಾಗಬೇಕು ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.

ನಗರದ ನಗರಸಭೆ ಕಾರ್ಯಾಲಯದಲ್ಲಿ ಬುಧವಾರ ನಡೆದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯಲ್ಲಿ ಅವರು ಮಾತನಾಡಿದರು.

ಸಾಮಾನ್ಯ ವ್ಯಕ್ತಿಯಾದ ಗಾಂಧೀಜಿ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸತ್ಯ ಹಾಗೂ ಅಹಿಂಸೆ ಮಾರ್ಗದಲ್ಲಿ ಲಕ್ಷಾಂತರ ಜನರನ್ನು ತಮ್ಮ ಜೊತೆ ಕರೆದುಕೊಂಡು ಹೋಗುವ ಮೂಲಕ ವಿಶ್ವನಾಯಕರಾದರು ಎಂದರು.‌

ಪ್ರಧಾನ ಮಂತ್ರಿಯಾಗಿದ್ದರೂ ಯಾವ ರೀತಿಯಲ್ಲಿ ಸರಳ ಬದುಕು ನಡೆಸಬಹುದು ಎನ್ನುವುದನ್ನು ತೋರಿಸಿಕೊಟ್ಟ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜೀವನ ಯುವಜನರಿಗೆ ಮಾದರಿಯಾಗಬೇಕು ಎಂದರು.

ನಗರಸಭೆ ಪೌರಾಯುಕ್ತ ರುದ್ರೇಶ್, ಅಧ್ಯಕ್ಷ ಜೀಷಾನ್ ಮಹಮೂದ್, ಉಪಾಧ್ಯಕ್ಷ ಲಕ್ಷ್ಮಿಕಾಂತ್, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಶಂಕರ್, ಸದಸ್ಯರಾದ ಎಸ್.ಎಲ್‌.ರಂಗನಾಥ್, ಜಾಫರ್, ಕೃಷ್ಣಪ್ಪ, ಬುರಾನ್ ಮಹಮೂದ್, ಅಜಯ್ ಕುಮಾರ್, ರಫೀವುಲ್ಲಾ, ಬಿ.ಎಂ.ರಾಧಾಕೃಷ್ಣ, ನಸ್ರುಲ್ಲಾಖಾನ್, ಭಾನುಪ್ರಕಾಶ್, ಮಜರ್ ಖಾನ್, ನೂರುದ್ದೀನ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT