ತುಮಕೂರು: ಶಾಸಕ ಟಿ.ಬಿ. ಜಯಚಂದ್ರಗೆ ಸಚಿವ ಸ್ಥಾನ ನೀಡುವಂತೆ ಅವರ ಎಂಟು ವರ್ಷದ ಮೊಮ್ಮಗಳು ಆರ್ನಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದಾಳೆ.

‘ನಮ್ಮ ತಾತನಿಗೆ ಸಚಿವ ಸ್ಥಾನ ನೀಡದಿರುವುದರಿಂದ ತುಂಬಾ ಬೇಸರ ಆಗಿದೆ. ಸಚಿವ ಸ್ಥಾನಕ್ಕೆ ಅವರು ಸೂಕ್ತವಾದ ವ್ಯಕ್ತಿ. ಅವರು ಶ್ರಮ ಜೀವಿ. ಜನರಿಗೆ ಸಹಾಯ ಮಾಡುತ್ತಾರೆ. ಅದಕ್ಕೆ ಅವರು ಸಚಿವರಾಗಬೇಕು’ ಎಂದು ಪತ್ರ ಹಾಗೂ ವಿಡಿಯೊ ಮೂಲಕ ಮನವಿ ಮಾಡಿದ್ದಾಳೆ.

‘ನಮ್ಮ ತಾತ ಜನರನ್ನು ತುಂಬಾ ಪ್ರೀತಿ ಮಾಡುತ್ತಾರೆ. ಅವರಿಗೆ ಸಚಿವ ಸ್ಥಾನ ಕೊಡುವಂತೆ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದೇನೆ. ದಯವಿಟ್ಟು ಈ ಪತ್ರವನ್ನು ಓದಿ’ ಎಂದು ಆಕೆ ಮನವಿ ಮಾಡಿಕೊಂಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ಮಗಳು ಸ್ವಇಚ್ಛೆಯಿಂದ ಪತ್ರ ಬರೆದಿದ್ದಾಳೆ. ಸೋಮವಾರ ಇದನ್ನು ರಾಹುಲ್ ಗಾಂಧಿ ಅವರಿಗೆ ಕಳುಹಿಸಲಾಗುವುದು’ ಎಂದು ಜಯಚಂದ್ರ ಅವರ ಪುತ್ರ ಸಂದೀಪ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.