ತುಮಕೂರು: ಏರಿಕೆಯತ್ತ ಮುಖ ಮಾಡಿದ್ದ ಏಲಕ್ಕಿ ಬಾಳೆಹಣ್ಣು ಈಗ ಗಗನಮುಖಿಯಾಗಿದ್ದು, ಕೆ.ಜಿ ₹110ಕ್ಕೆ ಜಿಗಿದಿದೆ. ತರಕಾರಿ, ಸೊಪ್ಪಿನ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಬೇಳೆ, ಧಾನ್ಯಗಳ ಧಾರಣೆ ಕೊಂಚ ಇಳಿಕೆಯಾಗಿದೆ. ಕೋಳಿ ಮಾಂಸ ಮತ್ತಷ್ಟು ಅಗ್ಗವಾಗಿದ್ದು, ಮೀನು ಮತ್ತೆ ದುಬಾರಿಯಾಗಿದೆ.

ಈರುಳ್ಳಿ ಏರಿಕೆ: ಸ್ವಲ್ಪ ಮಟ್ಟಿಗೆ ಯಥಾಸ್ಥಿತಿ ಕಾಯ್ದುಕೊಂಡಿದ್ದ ಈರುಳ್ಳಿ ಧಾರಣೆ ಈ ವಾರ ಏರಿಕೆಯಾಗಿದೆ. ಕೆಲವು ತರಕಾರಿಗಳ ದರ ತುಸು ಮೇಲೇರಿದ್ದರೆ, ಕೆಲವು ಮತ್ತೆ ಇಳಿಕೆಯಾಗಿವೆ. ಬೀನ್ಸ್, ಬೀಟ್ರೂಟ್ ಕೆ.ಜಿ ₹10 ಹೆಚ್ಚಳವಾಗಿದ್ದು, ಆಲೂಗೆಡ್ಡೆ, ಗೆಡ್ಡೆಕೋಸು, ತೊಂಡೆಕಾಯಿ, ಹಾಗಲಕಾಯಿ ಇಳಿಕೆಯಾಗಿದೆ. ಟೊಮೆಟೊ ಬೆಲೆ ತೀವ್ರವಾಗಿ ಕುಸಿದಿದ್ದು, ಕೆ.ಜಿ ₹15–20ಕ್ಕೆ ಮಾರಾಟವಾಗುತ್ತಿದೆ.

ಸೊಪ್ಪು ಯಥಾಸ್ಥಿತಿ: ಕಳೆದ ವಾರ ಸ್ವಲ್ಪ ಚೇರಿಸಿದ್ದ ಸೊಪ್ಪು, ಈ ವಾರ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಮೆಂತ್ಯೆ ಸೊಪ್ಪು ಅಲ್ಪ ಹೆಚ್ಚಳವಾಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹20–30, ಸಬ್ಬಕ್ಕಿ ಕೆ.ಜಿ ₹30–40, ಮೆಂತ್ಯ ಸೊಪ್ಪು ಕೆ.ಜಿ ₹30–40, ಪಾಲಕ್ ಸೊಪ್ಪು (ಕಟ್ಟು) ₹30ಕ್ಕೆ ಇಳಿಕೆಯಾಗಿದೆ.

ಬಾಳೆಹಣ್ಣು ದುಬಾರಿ: ಶ್ರಾವಣ ಮಾಸ ಆರಂಭವಾಗುವ ಹೊತ್ತಿಗೆ ಏಲಕ್ಕಿ ಬಾಳೆಹಣ್ಣು ಮತ್ತಷ್ಟು ದುಬಾರಿಯಾಗಿದ್ದು, ಕೆ.ಜಿ ₹110ರ ವರೆಗೂ ಏರಿಕೆಯಾಗಿದೆ. ಕೆಲವು ವಾರಗಳ ಹಿಂದೆ ಕೆ.ಜಿ ₹80ರ ಆಸುಪಾಸಿನಲ್ಲಿ ಇತ್ತು. ನಂತರದ ದಿನಗಳಲ್ಲಿ ಏರುತ್ತಲೇ ಬಂದಿದ್ದು, ಈಗ ಇನ್ನಷ್ಟು ಮೇಲೇರಿದೆ. ಮುಂದಿನ ದಿನಗಳಲ್ಲಿ ಸಾಲುಸಾಲು ಹಬ್ಬಗಳು ಬರಲಿದ್ದು, ಇನ್ನೂ ಏರಿಕೆಯಾಗಬಹುದು ಎಂದು ಹೇಳಲಾಗುತ್ತಿದೆ. ದ್ರಾಕ್ಷಿ ಒಮ್ಮೆಲೆ ಕೆ.ಜಿಗೆ ₹50 ಹೆಚ್ಚಳವಾಗಿದೆ. ಕರಬೂಜವೂ ಏರಿಕೆಯಾಗಿದ್ದು, ಮೂಸಂಬಿ ಅಲ್ಪ ಇಳಿದಿದೆ.

ಅಡುಗೆ ಎಣ್ಣೆ: ಎಣ್ಣೆ ಬೆಲೆ ಬಹುತೇಕ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಗೋಲ್ಡ್ವಿನ್ನರ್ ಕೆ.ಜಿ ₹110–112, ಪಾಮಾಯಿಲ್ ಕೆ.ಜಿ ₹88–90, ಕಡಲೆಕಾಯಿ ಎಣ್ಣೆ ಕೆ.ಜಿ ₹160–165ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಬೇಳೆ ಇಳಿಕೆ: ಬೇಳೆ, ಧಾನ್ಯಗಳ ಧಾರಣೆ ಕೊಂಚ ಕಡಿಮೆಯಾಗಿದೆ. ಕಡಲೆಬೇಳೆ, ಕಡಲೆ ಕಾಳು, ಹೆಸರು ಕಾಳು, ಅವರೆಕಾಳು, ಹುರುಳಿಕಾಳು ಅಲ್ಪ ಇಳಿದಿದೆ. ಗಗನಮುಖಿಯಾಗಿದ್ದ ಬಟಾಣಿ ಸಹ ಕೊಂಚ ಕಡಿಮೆಯಾಗಿದೆ.

ಮಸಾಲೆ ಪದಾರ್ಥ: ಗಸಗಸೆ ದರ ಸ್ವಲ್ಪ ಮಟ್ಟಿಗೆ ಇಳಿಕೆಯತ್ತ ಮುಖ ಮಾಡಿದ್ದು, ಕೆ.ಜಿಗೆ ₹50–100 ತಗ್ಗಿದೆ. ಚಕ್ಕೆ, ಮೆಂತ್ಯ, ಮೆಣಸಿನಕಾಯಿ ಕೊಂಚ ಕಡಿಮೆಯಾಗಿದೆ. ಲವಂಗ ದುಬಾರಿಯಾಗಿದ್ದು, ಏರಿಕೆಯತ್ತ ಸಾಗಿದ್ದ ಗೋಂಡಬಿ ಕೆ.ಜಿಗೆ ₹50 ಇಳಿದಿದೆ.

ಧನ್ಯ ಕೆ.ಜಿ ₹110–150, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹200–260, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹190–210, ಹುಣಸೆಹಣ್ಣು ₹120–150, ಬೆಲ್ಲ ಕೆ.ಜಿ ₹50–52, ಕಾಳುಮೆಣಸು ಕೆ.ಜಿ ₹750–780, ಜೀರಿಗೆ ಕೆ.ಜಿ ₹320–340, ಸಾಸಿವೆ ಕೆ.ಜಿ ₹80–85, ಮೆಂತ್ಯ ಕೆ.ಜಿ ₹90–95, ಚಕ್ಕೆ ಕೆ.ಜಿ ₹260–270, ಲವಂಗ ಕೆ.ಜಿ ₹880–920, ಗುಣಮಟ್ಟದ ಗಸಗಸೆ ಕೆ.ಜಿ ₹1,150–1,200, ಏಲಕ್ಕಿ ಕೆ.ಜಿ ₹2,800–3,000, ಬಾದಾಮಿ ಕೆ.ಜಿ ₹620–660, ಗೋಡಂಬಿ ಕೆ.ಜಿ ₹800–850, ಒಣದ್ರಾಕ್ಷಿ ಕೆ.ಜಿ ₹190–200ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ ಮತ್ತೆ ಅಗ್ಗ: ಶ್ರಾವಣ ಮಾಸದಲ್ಲಿ ಸಾಕಷ್ಟು ಜನರು ಮಾಂಸಾಹಾರ ತ್ಯಜಿಸುತ್ತಾರೆ. ಹಾಗಾಗಿ ಬೇಡಿಕೆ ಕಡಿಮೆಯಾಗಿದ್ದು, ಬೆಲೆ ಮತ್ತಷ್ಟು ಅಗ್ಗವಾಗಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹90, ರೆಡಿ ಚಿಕನ್ ಕೆ.ಜಿ ₹100, ಸ್ಕಿನ್ಲೆಸ್ ಕೆ.ಜಿ ₹150, ಮೊಟ್ಟೆಕೋಳಿ (ಫಾರಂ) ಕೆ.ಜಿ ₹110ಕ್ಕೆ ಇಳಿಕೆಯಾಗಿದೆ.

ಮೀನು ಹೆಚ್ಚಳ: ಮೀನಿನ ಧಾರಣೆ ಏರಿಕೆಯತ್ತಲೇ ಹೆಜ್ಜೆ ಹಾಕಿದೆ. ಬಂಗುಡೆ ಕೆ.ಜಿ ₹390, ಬೊಳಿಂಜರ್ ಕೆ.ಜಿ ₹220, ಅಂಜಲ್ ಕೆ.ಜಿ ₹1,130, ಬಿಳಿಮಾಂಜಿ ಕೆ.ಜಿ ₹1,130, ಕಪ್ಪುಮಾಂಜಿ ಕೆ.ಜಿ ₹1,030, ಇಂಡಿಯನ್ ಸಾಲ್ಮನ್ ಕೆ.ಜಿ ₹1,150, ಸೀಗಡಿ ಕೆ.ಜಿ ₹430–680, ಏಡಿ ಕೆ.ಜಿ 480ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.