ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ಗುಳೆ ಬಂದವರ ಗೋಳು ಕೇಳೋರ್‍ಯಾರು?: ಗುಡಿಸಲು ವಾಸಕ್ಕೆ ₹800 ಬಾಡಿಗೆ!

ಮೈಲಾರಿ ಲಿಂಗಪ್ಪ
Published : 15 ಜೂನ್ 2024, 6:36 IST
Last Updated : 15 ಜೂನ್ 2024, 6:36 IST
ಫಾಲೋ ಮಾಡಿ
Comments
ತುಮಕೂರಿನ ಬಡ್ಡಿಹಳ್ಳಿ ಬಳಿ ಸೀರೆಯಲ್ಲಿ ತೊಟ್ಟಿಲು ಕಟ್ಟಿ ಮಕ್ಕಳನ್ನು ಮಲಗಿಸಿರುವುದು
ತುಮಕೂರಿನ ಬಡ್ಡಿಹಳ್ಳಿ ಬಳಿ ಸೀರೆಯಲ್ಲಿ ತೊಟ್ಟಿಲು ಕಟ್ಟಿ ಮಕ್ಕಳನ್ನು ಮಲಗಿಸಿರುವುದು
ತುಮಕೂರಿನ ಶೆಟ್ಟಿಹಳ್ಳಿ ಕೆರೆಯ ಹತ್ತಿರ ನಿರ್ಮಾಣದ ಹಂತದಲ್ಲಿರುವ ಗುಡಿಸಲು
ತುಮಕೂರಿನ ಶೆಟ್ಟಿಹಳ್ಳಿ ಕೆರೆಯ ಹತ್ತಿರ ನಿರ್ಮಾಣದ ಹಂತದಲ್ಲಿರುವ ಗುಡಿಸಲು
‘ಊಟಕ್ಕೆ ರೊಕ್ಕಿಲ್ಲ ಓಟು ಹಾಕಾಕ ಎಲ್ಲಿ ಹೋಗೋಣ’
‘ಊಟಕ್ಕೆ ರೊಕ್ಕಿಲ್ಲ ಓಟು ಹಾಕಾಕ ಎಲ್ಲಿಂದ ಹೋಗೋಣ’– ಹೀಗೆ ಪ್ರಶ್ನೆ ಮಾಡಿದ್ದು ವಲಸೆ ಕಾರ್ಮಿಕರಾದ ರಾಯಚೂರಿನ ರತ್ನಮ್ಮ. ನಗರದಲ್ಲಿರುವ ವಲಸೆ ಕಾರ್ಮಿಕರಲ್ಲಿ ಶೇ 80ರಷ್ಟು ಜನ ಈ ಬಾರಿ ಮತದಾನ ಮಾಡಲು ತಮ್ಮೂರಿಗೆ ತೆರಳಿಲ್ಲ. ಇಲ್ಲಿರುವ ಜನರಿಗೆ ಚುನಾವಣೆ ಯಾವಾಗ ಎಂಬುದೇ ತಿಳಿದಿಲ್ಲ. ಅಧಿಕಾರಿಗಳು ಅಬ್ಬರದ ಪ್ರಚಾರ ಮಾಡಿದರೂ ವಲಸೆ ಕಾರ್ಮಿಕರನ್ನು ಮತಗಟ್ಟೆಗೆ ಕರೆ ತರುವ ಕೆಲಸವಾಗಿಲ್ಲ. ನಗರದ ಹೊರ ವಲಯದ ಬಡ್ಡಿಹಳ್ಳಿ ಹತ್ತಿರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಚೇರಿ ಇದೆ. ‘ದೀಪದ ಬುಡದಲ್ಲಿ ಕತ್ತಲು’ ಎಂಬಂತೆ ಈ ಕಚೇರಿಯ ಎದುರುಗಡೆಯೇ ನೂರಾರು ಜನ ವಲಸೆ ಕಾರ್ಮಿಕರು ವಾಸಿಸುತ್ತಿದ್ದರೂ ಅವರಿಗೆ ಮತದಾನದ ಬಗ್ಗೆ ಅರಿವು ಮೂಡಿಸಿಲ್ಲ. ಮತದಾನ ಮಾಡಲು ತಮ್ಮ ಊರುಗಳಿಗೆ ತೆರಳುವಂತೆ ಮನವೊಲಿಸಲು ಯಾರೊಬ್ಬರೂ ಮುಂದಾಗಿಲ್ಲ. ‘ಒಮ್ಮೆ ಊರಿಗೆ ಹೋದ್ರೆ ₹5 ಸಾವಿರ ಬೇಕಾಗುತ್ತೆ ದುಡ್ಡು ಯಾರು ಕೊಡ್ತಾರೆ. ಇಲ್ಲೇ ಇದ್ರೆ ಒಂದು ದಿನದ ಕೂಲಿಯಾದರೂ ಸಿಗುತ್ತೆ’ ಎಂದು ಸುನಂದಮ್ಮ ಪ್ರತಿಕ್ರಿಯಿಸಿದರು.
ಆರಂಭವಾಗದ ಶಿಶು ಪಾಲನಾ ಕೇಂದ್ರ
ಕಟ್ಟಡ ಮತ್ತು ಇತರೆ ನಿರ್ಮಾಣ ಹಾಗೂ ವಲಸೆ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಜಿಲ್ಲೆಯ ವಿವಿಧೆಡೆ ಆರಂಭಿಸಿದ್ದ 5 ಶಿಶು ಪಾಲನಾ ಕೇಂದ್ರಗಳನ್ನು ಕಳೆದ ವರ್ಷ ಮುಚ್ಚಲಾಯಿತು. ಈ ಕೇಂದ್ರಗಳಲ್ಲಿ ಮಕ್ಕಳ ಕಲಿಕೆ ನಿರಾಂತಕವಾಗಿ ಸಾಗಿತ್ತು. ಪೋಷಕರು ಕೆಲಸಕ್ಕೆ ಹೋದರೆ ಮಕ್ಕಳು ಕೇಂದ್ರಗಳಲ್ಲಿ ದಿನ ಕಳೆಯುತ್ತಿದ್ದರು. ಅನುದಾನದ ಕೊರತೆಯಿಂದ ಮುಚ್ಚಿದ್ದ ಕೇಂದ್ರಗಳನ್ನು ಇದುವರೆಗೆ ಆರಂಭಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT