ಕೊಡಿಗೇನಹಳ್ಳಿ: ಎರಡು ದಿನಗಳಿಂದ ಬೀಳುತ್ತಿರುವ ಜಿಟಿಜಿಟಿ ಮಳೆಗೆ ಒಂದಡೆ ಜನ ಹೈರಾಣಾದರೆ, ಮತ್ತೊಂದೆಡೆ ಜಾನುವಾರು ಹಾಗೂ ಕುರಿಗಾಹಿಗಳು ಪರದಾಡುವಂತಾಗಿದೆ.

ಕೊಡಿಗೇನಹಳ್ಳಿ ಹೋಬಳಿಯಾದ್ಯಂತ ಕಳೆದ 2 ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಜನರು ಮನೆಗಳಿಂದ ಹೊರ ಬರಲು ಹೆದರುವಂತಾಗಿದೆ. ಅಗತ್ಯ ವಸ್ತುಗಳನ್ನು ತರುವವರು ರೈನ್ಕೋಟ್ ಮತ್ತು ಛತ್ರಿಗಳೊಂದಿಗೆ ಓಡಾಡುವಂತಾಗಿದೆ.

ಮಳೆ ಇನ್ನು ಮೂರ್ನಾಲ್ಕು ದಿನ ಮುಂದುವರಿದರೆ ಕುರಿ-ಮೇಕೆಗಳ ಪರಿಸ್ಥಿತಿ ಕಷ್ಟವಾಗಲಿದೆ ಎನ್ನುತ್ತಾರೆ ಕುರಿಗಾಹಿ ದೇವರತೋಪು ಶ್ರೀರಾಮಪ್ಪ.

ಜಯಮಂಗಲಿ ಹರಿವು ಹೆಚ್ಚಳ: ಮಧುಗಿರಿ ಹಾಗೂ ಕೊರಟಗೆರೆ ಭಾಗದಲ್ಲಿ ಮಳೆಯಾಗಿದ್ದರಿಂದ ಜಯಮಂಗಲಿ ನದಿ ನೀರಿನ ಹರಿವು ಹೆಚ್ಚಳವಾಗಿದೆ. ಮಂಗಳವಾರ ಒಂದಷ್ಟು ನೀರು ಜಾಸ್ತಿಯಾಗಿದ್ದರೆ ಬುಧವಾರ ಮತ್ತಷ್ಟು ಹೆಚ್ಚಳವಾಗಿದೆ. ದೊಡ್ಡಮಾಲೂರು ಹಾಗೂ ಮೈದನಹಳ್ಳಿ ಕೆರೆಗಳು ಒಂದೆರೆಡು ದಿನಗಳಲ್ಲಿ ಕೋಡಿ ಬೀಳುವ ಹಂತಕ್ಕೆ ಬಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.