ಪಾವಗಡ: ರಾಗಿ ನಿಪ್ಪಟ್ಟು, ಅಕ್ಕಿ ನಿಪ್ಪಟ್ಟು, ಕೊಬ್ಬರಿ ಕಡುಬು, ಕಡ್ಲೆ ಕಡುಬು, ಕೋಡಬಳೆ... ಹೀಗೆ ವಿವಿಧ ತಿನಿಸುಗಳ ಮೂಲಕ ವಾಸವಿ ಕಾಂಡಿಮೆಂಟ್ಸ್ ಮತ್ತು ಚಾಟ್ಸ್ ಸೆಂಟರ್ ಅಜ್ಜಿಯ ಕೈ ರುಚಿ ನೆನಪಿಸುತ್ತದೆ.

ಪಟ್ಟಣದ ಬಳ್ಳಾರಿ ರಸ್ತೆಯ ನ್ಯಾಯಾಲಯದ ಮುಂಭಾಗದಲ್ಲಿರುವ ವಾಸವಿ ಕಾಂಡಿಮೆಂಟ್ಸ್‌ಗೆ ಕಾಫಿ, ಚಹಾ, ತಿನಿಸುಗಳನ್ನು ಸೇವಿಸಲು ವಿವಿಧೆಡೆಗಳಿಂದ ಜನ ಬರುತ್ತಾರೆ. ಬದನೆಕಾಯಿ ಬೋಂಡ, ಪಲ್ಯ ಬೋಂಡ, ಮೆಣಸಿನ ಕಾಯಿ ಬೋಂಡ, ಈರುಳ್ಳಿ ಪಕೋಡ, ವಡೆ, ಚುರುಮುರಿ ಸೇರಿದಂತೆ ಅನೇಕ ತಿನಿಸು ಸದಾ ಸಿದ್ಧವಿರುತ್ತದೆ.

ರಾಗಿ, ಅಕ್ಕಿ ನಿಪ್ಪಟ್ಟು, ರಾಗಿ ಮುರುಕು, ಕಡುಬು ಇಲ್ಲಿನ ವಿಶೇಷ. ವಾರದ ಮೊದಲೇ ತಿನಿಸು ತಯಾರಿಸಿಕೊಡುವಂತೆ ಮುಂಗಡ ಹಣ ನೀಡಿ ವಿವಿಧ ತಿನಿಸುಗಳನ್ನು ಗ್ರಾಹಕರು ತೆಗೆದುಕೊಂಡು ಹೋಗುತ್ತಾರೆ. ಕಾಂಡಿಮೆಂಟ್ಸ್ ಮಾಲೀಕ ಗೋಪಾಲಕೃಷ್ಣ ಅವರು ಹಬ್ಬ, ವಿಶೇಷ ಕಾರ್ಯಕ್ರಮಗಳಿಗಾಗಿ ಕ್ಯಾಟರಿಂಗ್ ಮಾಡುತ್ತಾರೆ.

ತಾಲ್ಲೂಕಿನ ವಿವಿಧ ಭಾಗಗಳಿಂದ ಪಟ್ಟಣಕ್ಕೆ ಬಂದವರು ತಪ್ಪದೇ ಕಾಂಡಿಮೆಂಟ್ಸ್‌ಗೆ ಭೇಟಿ ನೀಡುತ್ತಾರೆ. ನ್ಯಾಯಾಲಯಕ್ಕೆ ಹಾಜರಾಗುವ ಕಕ್ಷಿದಾರರು, ವಕೀಲರು, ನ್ಯಾಯಾಲಯದ ಸಿಬ್ಬಂದಿಗೆ ಇದು ನೆಚ್ಚಿನ ತಾಣ. ನ್ಯಾಯಾಲಯದಿಂದ ಕಾಂಡಿಮೆಂಟ್ಸ್ ಕಡೆ ಬಂದು ಬಿಸಿ ಕಾಫಿ, ಚಹಾ ಸೇವಿಸಿ ಹೋಗುವುದು ಸಾಮಾನ್ಯ.

‘6 ವರ್ಷಗಳಿಂದ ಕಾಂಡಿಮೆಂಟ್ಸ್ ನಡೆಸುತ್ತಿದ್ದೇನೆ. ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಕುಟುಂಬದ ಸದಸ್ಯರೂ ಜತೆಗೂಡಿದ್ದಾರೆ. ಎಲ್ಲಾ ತಿನಿಸುಗಳನ್ನು ಮನೆಯಲ್ಲೇ ಶುಚಿ, ಗುಣಮಟ್ಟದ ಪದಾರ್ಥಗಳಿಂದ ತಯಾರಿಸಲಾಗುತ್ತದೆ. ಹೀಗಾಗಿ ತಿನಿಸುಗಳಿಗೆ ಹೆಚ್ಚಿನ ಬೇಡಿಕೆ ಇದೆ’ ಎಂದು ಮಾಲೀಕ ಗೋಪಾಲಕೃಷ್ಣ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.