ತುಮಕೂರು: ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅವರ ಬದುಕಿನ ಹಾದಿ ಪರಿಚಯಿಸುವ ‘ಸವ್ಯಸಾಚಿ ಪರಮೇಶ್ವರ’ ಸಾಕ್ಷ್ಯ ಚಿತ್ರದ ಚಿತ್ರೀಕರಣಕ್ಕೆ ಅವರ ಹುಟ್ಟು ಹಬ್ಬದ ದಿನ ಆ.6ರಂದು ಮಧ್ಯಾಹ್ನ 2.30 ಗಂಟೆಗೆ ಬೆಂಗಳೂರಿನ ಸದಾಶಿವ ನಗರದ ಸಚಿವರ ನಿವಾಸದಲ್ಲಿ ಚಾಲನೆ ಸಿಗಲಿದೆ.

‘ನಟ ಪ್ರಕಾಶ್ ರಾಜ್ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಲಿದ್ದಾರೆ. ವನ್ಯಜೀವಿ ತಜ್ಞ ಕೃಪಾಕರ ಸೇನಾನಿ, ‘ಪ್ರಜಾವಾಣಿ’ ಸುದ್ದಿ ಸಂಪಾದಕ ಜಿ.ಡಿ.ಯತೀಶ್‌ಕುಮಾರ್ ಕ್ಯಾಮೆರಾಗೆ ಚಾಲನೆ ನೀಡಲಿದ್ದಾರೆ. ನಟ ರವೀಂದ್ರನಾಥ ಸಚಿವ ಜಿ.ಪರಮೇಶ್ವರ ಅವರ ಸಂದರ್ಶನ ನಡೆಸಲಿದ್ದಾರೆ’ ಎಂದು ಸಾಕ್ಷ್ಯಚಿತ್ರದ ನಿರ್ಮಾಪಕ, ನಿರ್ದೇಶಕ ಪ್ರೊ.ಮಾದೇವ ಭರಣಿ ತಿಳಿಸಿದ್ದಾರೆ.

‘ಪರಮೇಶ್ವರ ಅವರು ನೈತಿಕ, ಪ್ರಾಮಾಣಿಕತೆ ಹಾಗೂ ಸಾಮಾಜಿಕ ನ್ಯಾಯಗಳ ಗುರಿಯೊಂದಿಗೆ ತಮ್ಮ ರಾಜಕಾರಣದ ಪ್ರಮುಖ ಘಟ್ಟ ತಲುಪಿದ್ದಾರೆ. ಮೌನವಾಗಿಯೇ ಅನೇಕ ಸಾಧನೆಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಅವರ ಜೀವನದ 75 ವಸಂತಗಳ ದಿಟ್ಟ ಹೆಜ್ಜೆಗಳ ಸ್ಮರಣೆಗಾಗಿ ಸಾಕ್ಷ್ಯಚಿತ್ರ ನಿರ್ಮಿಸಲಾಗುತ್ತಿದೆ’ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.