ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೆ. 27ರಿಂದ ತುಮಕೂರು– ಯಶವಂತಪುರ ಮೆಮು ರೈಲು ಸಂಚಾರ ಶುರು

Published : 20 ಸೆಪ್ಟೆಂಬರ್ 2024, 19:51 IST
Last Updated : 20 ಸೆಪ್ಟೆಂಬರ್ 2024, 19:51 IST
ಫಾಲೋ ಮಾಡಿ
Comments

ತುಮಕೂರು: ತುಮಕೂರು– ಯಶವಂತಪುರ ನಡುವೆ ಹೊಸದಾಗಿ ಮೆಮು ರೈಲು ಸಂಚಾರ ಸೆ. 27ರಿಂದ ಆರಂಭವಾಗಲಿದೆ.

ಪ್ರತಿದಿನ ತುಮಕೂರಿನಿಂದ ಬೆಳಿಗ್ಗೆ 8.45 ಗಂಟೆಗೆ ಹೊರಟು 10.25ಕ್ಕೆ ಯಶವಂತಪುರ ತಲುಪಲಿದೆ. ಸಂಜೆ 5.40 ಗಂಟೆಗೆ ಯಶವಂತಪುರದಿಂದ ಹೊರಟು 7.05ಕ್ಕೆ ತುಮಕೂರು ತಲುಪಲಿದೆ. ಎಲ್ಲಾ ನಿಲ್ದಾಣದಲ್ಲೂ ನಿಲುಗಡೆ ಇರಲಿದೆ. ಭಾನುವಾರ ಈ ರೈಲು ಸಂಚಾರ ಇರುವುದಿಲ್ಲ.

ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮೆಮು ರೈಲು ಸಂಚಾರಕ್ಕೆ ಸೆ. 27ರಂದು ನಗರದಲ್ಲಿ ಚಾಲನೆ ನೀಡಲಿದ್ದಾರೆ.

ಪ್ರತಿ ಸೋಮವಾರ (ವಾರಕ್ಕೊಮ್ಮೆ) ಬೆಂಗಳೂರು ಬಾಣಸವಾಡಿಯಿಂದ ಬೆಳಿಗ್ಗೆ 6.15ಕ್ಕೆ ಮತ್ತೊಂದು ಮೆಮು ರೈಲು ಸಂಚಾರ ಆರಂಭವಾಗಲಿದೆ. ಚಿಕ್ಕಬಾಣಾವರದ ಮೂಲಕ (ಯಶವಂತಪುರದ ಮೂಲಕ ಅಲ್ಲ) ಸಂಚರಿಸಲಿದ್ದು, ಬೆಳಿಗ್ಗೆ 8.35ಕ್ಕೆ ತುಮಕೂರು ತಲುಪಲಿದೆ. ಪ್ರತಿ ಶನಿವಾರ (ವಾರಕ್ಕೊಮ್ಮೆ) ರಾತ್ರಿ 7.40ಕ್ಕೆ ತುಮಕೂರಿನಿಂದ ಹೊರಟು ರಾತ್ರಿ 10.05ಕ್ಕೆ ಬಾಣಸವಾಡಿ ತಲುಪಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT