ಉಡುಪಿ: ತಾಂತ್ರಿಕತೆಯ ವಿಕಾಸದ ಪರಿಣಾಮವಾಗಿ ಇಂದು ಅಮೆಜಾನ್ ಮತ್ತು ಸ್ವಿಗ್ಗಿಯಂತಹ ಕೃತಕ ಬುದ್ದಿಮತ್ತೆ (ಎಐ) ಚಾಲಿತ ವೇದಿಕೆಗಳು ಜನಪ್ರಿಯವಾಗುತ್ತಿವೆ ಎಂದು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ರೋಬೋಟಿಕ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎನ್ಐಆರ್ಎ) ಮಹಾನಿರ್ದೇಶಕ ಡಾ. ಇಂದ್ರಜಿತ್ ಭಟ್ಟಾಚಾರ್ಯ ಹೇಳಿದರು.

ಮಣಿಪಾಲದ ಕೆಎಂಸಿ ಗ್ರೀನ್ಸ್ನಲ್ಲಿ ಶನಿವಾರ ನಡೆದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್(ಮಾಹೆ) ವಿಶ್ವವಿದ್ಯಾಲಯದ 32ನೇ ಘಟಿಕೋತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉಗಿ ಚಾಲಿತ ಎಂಜಿನ್ಗಳಿಂದ ಆರಂಭವಾಗಿ ಸೈಬರ್ ಭೌತಿಕ ವ್ಯವಸ್ಥೆಗಳವರೆಗೆ ನಮ್ಮ ತಾಂತ್ರಿಕ ವಿಕಾಸದ ಪ್ರಯಾಣವು ಮುಂದುವರಿದಿದೆ ಈಗ ಅದು ಕೃತಕ ಬುದ್ಧಿಮತ್ತೆಯ ಕಡೆಗೆ ಹೊರಳಿದೆ ಎಂದರು.

ಕೃತಕ ಬುದ್ಧಿಮತ್ತೆಯಿಂದ ಜನರು ಕೆಲಸ ಕಳೆದುಕೊಳ್ಳುವುದಿಲ್ಲ, ಉತ್ಪಾದಕತೆ ಹೆಚ್ಚಿಸಲು ಸುಧಾರಿತ ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಎಲ್ಲಾ ಕ್ಷೇತ್ರಗಳಲ್ಲೂ ಬಳಸಬಹುದು ಎಂದರು.

ಶಿಕ್ಷಣ ಕ್ಷೇತ್ರ ಕೂಡ ಕೃತಕ ಬುದ್ದಿಮತ್ತೆ ಮೂಲಕ ರೂಪಾಂತರಗೊಳ್ಳುತ್ತಿದೆ. ಕಲಿಕೆಯು ಅಂತರರ್ಶಿಸ್ತೀಯ ಸಂಶೋಧನೆ, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಕೃತಕ ಬುದ್ದಿಮತ್ತೆ ಚಾಲಿತ ಸೈಬರ್ ಸುರಕ್ಷತೆವರೆಗೆ ತನ್ನ ಕಾರ್ಯಕ್ಷೇತ್ರವನ್ನು ವ್ಯಾಪಿಸಿದೆ ಎಂದು ಹೇಳಿದರು.

ಮಾಹೆಯ ಸಹ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಮಾತನಾಡಿದರು. ಮಾಹೆಯ ಟ್ರಸ್ಟಿ ವಸಂತಿ ಆರ್.ಪೈ, ಸಹ ಕುಲಾಧಿಪತಿ ಡಾ.ಎಚ್.ಎಸ್ ಬಲ್ಲಾಳ್, ಕುಲಪತಿ ಲೆಫ್ಟಿನೆಂಟ್ ಜನರಲ್ ಎಂ.ಡಿ. ವೆಂಕಟೇಶ್, ಸಹ ಕುಲಪತಿಗಳಾದ ಡಾ. ನಾರಾಯಣ ಸಭಾಹಿತ್, ಡಾ. ಶರತ್ ಕೆ. ರಾವ್, ಡಾ. ದಿಲೀಪ್ ಜಿ. ನಾಯಕ್, ರಿಜಿಸ್ಟ್ರಾರ್ ಡಾ.ಗಿರಿಧರ್ ಕಿಣಿ, ಡಾ. ವಿನೋದ್ ವಿ. ಥಾಮಸ್ ಉಪಸ್ಥಿತರಿದ್ದರು.

ಸಹಾಯಕ ಪ್ರಾಧ್ಯಾಪಕ ಡಾ. ಆನಂದ್ ದೀಪ್ ಶುಕ್ಲಾ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.