ಕುಂದಾಪುರ: ‘ಬಿಜೆಪಿಗರ ದೇವಾಲಯವಾಗಿರುವ ಕರಾವಳಿಯಲ್ಲಿ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದ ಮಹಿಳೆಯರು ತಮ್ಮ ಸಂಘಟನೆ ಒಗ್ಗಟ್ಟು ಏನು ಎನ್ನುವುದನ್ನು ಈ ಸಮಾವೇಶದ ಮೂಲಕ ತೋರಿಸಿದ್ದಾರೆ. ರಾಜಕೀಯದಲ್ಲಿ ಸಜ್ಜನರ ಸೇವೆ ಸಮಾಜಕ್ಕೆ ಅವಶ್ಯವಿದೆ ಎನ್ನುವುದನ್ನು ತೋರಿಸಲು ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಅವರನ್ನು ಅಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕಾಗಿದೆ’ ಎಂದು ವಿಧಾನ ಪರಿಷತ್ ಸದಸ್ಯೆ ನಟಿ ತಾರಾ ಹೇಳಿದರು.

ಕುಂದಾಪುರ ಸಮೀಪದ ಹೆಮ್ಮಾಡಿ ಜಯಶ್ರೀ ಸಭಾಂಗಣದಲ್ಲಿ ಮಂಗಳವಾರ ಬಿಜೆಪಿ ಮಹಿಳಾ ಮೋರ್ಚಾ ಆಶ್ರಯದಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಅವರು ಮಾತನಾಡಿದರು.

ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಮಾತನಾಡಿ, ‘ಬೈಂದೂರಿನ ಮಾತೆಯರು ಚುನಾವಣಾ ಭವಿಷ್ಯದ ದಿಕ್ಸೂಚಿಯಾಗುತ್ತಾರೆ. ಮಹಿಳೆಯರ ರಕ್ಷಣೆ, ಯುವಕರಿಗೆ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಕೈಗಾರಿಕೆಗಳ ಸ್ಥಾಪನೆ ನನ್ನ ಕನಸಾಗಿದೆ. ಬೈಂದೂರಿನಲ್ಲಿ ಉದ್ಯೋಗ ನೀಡುವುದಕ್ಕಾಗಿ 3 ಕಾರ್ಖಾನೆ ಸ್ಥಾಪಿಸಿ, ಸಾಲಗಾರನೂ ಆದೆ. ನಾನು ನಿರ್ಗಳವಾಗಿ ಮಾತನಾಡುವ ಭಾಷಣಕಾರನಲ್ಲ, ಆದರೆ ಕೆಲಸ ಮಾಡುವ ಕೆಲಸಗಾರ. ಜನಸಾಮಾನ್ಯರನ್ನು ಗುರುತಿಸಿ ಜವಾಬ್ದಾರಿ ನೀಡುವ ಪಕ್ಷವೊಂದಿದ್ದರೆ ಅದು ಬಿಜೆಪಿ. ಕೆಲಸಗಾರನಾಗಿ ನಿರೂಪಿಸುವ ಜವಾಬ್ದಾರಿ ಸಿಕ್ಕದೆ ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸುವೆ’ ಎಂದರು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯದರ್ಶಿ ಗೋವಿಂದ ಬಾಬು ಪೂಜಾರಿ, ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮಾತನಾಡಿದರು.

ಚುನಾವಣೆ ಉಸ್ತುವಾರಿ ಬ್ರಿಜೇಶ್ ಚೌಟ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ, ಬೈಂದೂರು ಅಧ್ಯಕ್ಷೆ ಭಾಗೀರತಿ ಸುರೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶೋಭಾ ಜಿ.ಪುತ್ರನ್, ಕುಂದಾಪುರ ತಾಲ್ಲೂಕು ಮಾಜಿ ಅಧ್ಯಕ್ಷ ಇಂದಿರಾ ಶೆಟ್ಟಿ, ಮಾಜಿ ಸದಸ್ಯೆ ಮಾಲತಿ, ಬೈಂದೂರು ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ ಇದ್ದರು.

ರಾಷ್ಟ್ರೀಯ ಸ್ವಯಂಸೇವಾ ಸಂಘ ಪ್ರಮುಖರಾದ ಗೋಪಾಲ ಅವರು, ಗುರುರಾಜ್ ಗಂಟಿಹೊಳೆ ಅವರ ಪರಿಚಯಿಸಿದರು. ಮರವಂತೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಅನಿತಾ ವಂದಿಸಿದರು.

Quote - ಕಾಂಗ್ರೆಸ್ ಓಟಿಗಾಗಿ ಓಲೈಕೆ ರಾಜಕೀಯ ಮಾಡುತ್ತಿದ್ದು ಬಜರಂಗದಳ ಬ್ಯಾನ್ ಎನ್ನುವ ಜೇನು ಗೂಡಿಗೆ ಕೈ ಹಾಕಿದೆ. ಗ್ಯಾರೆಂಟಿ ಹೇಳದೆ ಜನಸಾಮಾನ್ಯರಿಗೆ ಯೋಜನೆ ನೀಡಿದ ಬಿಜೆಪಿಯನ್ನು ಬೆಂಬಲಿಸಿ ಭಾರತಿ ಶೆಟ್ಟಿ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.