ಉಡುಪಿ: ಕುಂದಾಪುರ ಮೂಲದ ವಿಲ್ಮಾ ಕ್ರಾಸ್ತಾ ಕರ್ವಾಲೋ ಪುತ್ರಿ ಚೆರಿಶ್ ಕರ್ವಾಲೋ ಜತೆಗೂಡಿ ಬೈಕ್‌ನಲ್ಲಿ ಜಗತ್ತಿನ ಅತಿ ಎತ್ತರದ ಮೊಟಾರಬಲ್ ಪ್ರದೇಶವಾದ ಉಮ್ಲಿಂಗ್ ಪಾಸ್‌ಗೆ ತೆರಳಿ ಗಮನ ಸೆಳೆದಿದ್ದಾರೆ.

ಈ ಹಿಂದೆ ಜಗತ್ತಿನ ಎರಡನೇ ಅತಿ ಎತ್ತರದ ಪ್ರದೇಶವಾದ ಖರ್ದುಂಗ್ಲಾ ಪಾಸ್‌ಗೆ ಬೈಕ್‌ನಲ್ಲಿ ತೆರಳಿ ಗಮನ ಸೆಳೆದಿದ್ದರು. ಇದೀಗ ಉಮ್ಲಿಂಗ್ ಪಾಸ್‌ಗೆ ಹೋಗಿ ಮತ್ತೆ ಸುದ್ದಿಯಲ್ಲಿದ್ದಾರೆ.

ಸಮುದ್ರಮಟ್ಟಕ್ಕಿಂತ 19,024 ಅಡಿ ಎತ್ತರದಲ್ಲಿರುವ ಉಮ್ಲಿಂಗ್ ಪಾಸ್ ಪ್ರದೇಶ ಭಾರತ– ಚೀನಾ ಗಡಿಯಲ್ಲಿದೆ. ಲಡಾಕ್ ಪ್ರಾಂತ್ಯದಲ್ಲಿ ಬರುವ ಉಮ್ಲಿಂಗ್ ಬೆಟ್ಟಗುಡ್ಡಗಳಿಂದ ತುಂಬಿದ್ದು, ಸಾಹಸಿ ರೈಡರ್‌ಗಳು ಮಾತ್ರ ಇಲ್ಲಿಗೆ ಯಾನ ಮಾಡುತ್ತಾರೆ. 55ರ ಹರೆಯದಲ್ಲೂ ವಿಲ್ಮಾ ವಿಶ್ವದ ಎತ್ತರದ ಸ್ಥಳವನ್ನು ತಲುಪಿರುವುದು ವಿಶೇಷ.

ಲಡಾಖ್‌ಗೆ ಮೂರನೇ ಬಾರಿ ಬೈಕ್ ಮೂಲಕ ತೆರಳಿದ್ದು ಮಗಳು ಚೆರಿಶ್‌ಳಿಂದ ಸಾಹಸಯಾತ್ರೆ ಸಾಧ್ಯವಾಗಿದೆ ಎನ್ನುತ್ತಾರೆ ವಿಲ್ಮಾ ಕ್ರಾಸ್ತಾ. ಯೋಗ, ಪ್ರಾಣಾಯಾಮ, ಧ್ಯಾನದಲ್ಲಿ ಆಸಕ್ತಿ ಹೊಂದಿರುವ ವಿಲ್ಮಾ ವೃತ್ತಿಯಲ್ಲಿ ಕಾರ್ಪೋರೇಟರ್ ಟ್ರೈನರ್ ಆಗಿದ್ದು ಕುಟುಂಬದ ಜತೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.