ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಹಿಂದೂ ಸಂಘಟನೆಯ ಧುರೀಣ ಪ್ರವೀಣ್ ಹತ್ಯೆ ನಡೆದಿರುವುದು ತೀವ್ರ ಕಳವಳಕಾರಿ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

ಕೊಲೆಯಂತಹ ಹೇಯಕೃತ್ಯ ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು. ನಾಡಿನಲ್ಲಿ ಇಂಥಹ ದುಷ್ಕೃತ್ಯಗಳು ನಿರಂತರವಾಗಿ ನಡೆಯುತ್ತಿರುವುದರಿಂದ ಜನಾಕ್ರೋಶ ಹೆಚ್ಚಾಗಿದ್ದು, ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುವ ಸ್ಥಿತಿ ತಲುಪುತ್ತಿರುವಂತೆ ಕಾಣುತ್ತಿದೆ. ಇದಕ್ಕೂ ಮುನ್ನ ಸರ್ಕಾರ ಪಾತಕಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ವಾಮೀಜಿ ಒತ್ತಾಯಿಸಿದ್ದಾರೆ.

ಧೈರ್ಯ ಕಳೆದುಕೊಳ್ಳಬೇಡಿ: ‘ಈಚೆಗಷ್ಟೆ ನಡೆದ ಹರ್ಷನ ಹತ್ಯೆಯ ದುಃಖದಿಂದ ಹೊರಬರುವ ಮುನ್ನವೇ ಮತ್ತೊಬ್ಬ ತರುಣನ ಕೊಲೆಯಾಗಿದ್ದು, ಹಿಂದೂಗಳ ಸಹನೆಯ ಕಟ್ಟೆ ಒಡೆಯುವಷ್ಟು ಆಕ್ರೋಶ ವ್ಯಕ್ತವಾಗುತ್ತಿರುವುದು ಸಹಜ. ಆದರೆ, ಯಾರೂ ಧೈರ್ಯ ಕಳೆದುಕೊಳ್ಳಬಾರದು. ಸಂಯಮದಿಂದ ಒಗ್ಗಟ್ಟು ಕಾಯ್ದುಕೊಳ್ಳಬೇಕು. ಎಲ್ಲರ ನೋವಿನಲ್ಲಿ ಸಹಾನುವರ್ತಿಯಾಗಿದ್ದೇನೆ ಎಂದು ತಿಳಿಸಿರುವ ಸ್ವಾಮೀಜಿ, ಮೃತ ಪ್ರವೀಣನ ಆತ್ಮಕ್ಕೆ ಸದ್ಗತಿ ದೊರೆಯಲಿ. ಕುಟುಂಬದವರಿಗೆ ದುಃಖ ಸಹಿಸುವ ಶಕ್ತಿಯನ್ನು ದೇವರು ಕರುಣಿಸಲಿ’ ಎಂದು ತಿಳಿಸಿದ್ದಾರೆ.

ಇವನ್ನೂ ಓದಿ...

ಬೆಳ್ಳಾರೆ: ಬಿಜೆಪಿ ಮುಖಂಡನ ಕೊಲೆ

ಪ್ರವೀಣ್ ಕೊಲೆಯನ್ನು ಸರ್ಕಾರಗಂಭೀರವಾಗಿ ಪರಿಗಣಿಸಿದೆ: ಸಚಿವ ಸುನೀಲ್ ಕುಮಾರ್

ಹಿಂಸೆಗೆ ಧರ್ಮವಿಲ್ಲ, ಕೊಲೆಗಡುಕ ಶಕ್ತಿಗಳ ಮುಂದೆ ಸರ್ಕಾರ ಮಂಡಿಯೂರಿದೆ: ಎಚ್ಡಿಕೆ

ಪ್ರವೀಣ್ ಹತ್ಯೆ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದ ರೇಣುಕಾಚಾರ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.