ಉಡುಪಿ: ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಪೊಲೀಸರು ₹98,770 ಮೌಲ್ಯದ ಗಾಂಜಾ ಮತ್ತು ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಟ್ವಾಳ ತಾಲ್ಲೂಕಿನ ನರಿಂಗಾಣ ಗ್ರಾಮದ ಮಹಮ್ಮದ್ ಸಪಾಝ್ (29) ಮತ್ತು ಸಂತೆಕಟ್ಟೆಯ ಚರಣ್ ಯು ಭಂಡಾರಿ (19) ಬಂಧಿತ ಆರೋಪಿಗಳು.

ಉಡುಪಿ ತಾಲ್ಲೂಕಿನ ಪುತ್ತೂರು ಗ್ರಾಮದ ನಾರಾಯಣ ನಗರ ರಸ್ತೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸಾಗಿಸುತ್ತಿದ್ದ ವೇಳೆ ಇವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಿಂದ 740 ಗ್ರಾಂ ತೂಕದ ಗಾಂಜಾ, ಸ್ಕೂಟರ್, ₹2170 ನಗದು, ಎರಡು ಮೊಬೈಲ್ ಮತ್ತು ಚೂರಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಸೆನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್ ಮತ್ತು ಪ್ರೊಬೆಷನರಿ ಡಿವೈಎಸ್ಪಿ ಗೀತಾ ಪಾಟೀಲ್ ಅವರ ನೇತೃತ್ವದಲ್ಲಿ ಸಬ್ ಇನ್ಸ್ಪೆಕ್ಟರ್ ಪವನ್ ನಾಯಕ್, ಸಿಬ್ಬಂದಿ ಪ್ರವೀಣ್ ಕುಮಾರ್, ಪ್ರವೀಣ್, ರಾಜೇಶ್, ವೆಂಕಟೇಶ್, ನಿಲೇಶ್, ರಾಘವೇಂದ್ರ, ಪ್ರಶಾಂತ್ ಮತ್ತು ಚರಣ್ರಾಜ್ ಅವರನ್ನು ಒಳಗೊಂಡ ತಂಡವು ಆರೋಪಿಗಳನ್ನು ಬಂಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.