ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಸ್ಕೃತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

Published : 21 ಸೆಪ್ಟೆಂಬರ್ 2024, 5:48 IST
Last Updated : 21 ಸೆಪ್ಟೆಂಬರ್ 2024, 5:48 IST
ಫಾಲೋ ಮಾಡಿ
Comments

ಹೆಬ್ರಿ: ಶ್ರೀಕೃಷ್ಣ ಮಠ, ಜಿಲ್ಲಾ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕರ ಸಂಘದ ವತಿಯಿಂದ 2023-24ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 125ಕ್ಕೆ 125 ಮತ್ತು 124 ಅಂಕ ಗಳಿಸಿದ ವಿವಿಧ ಸಂಸ್ಥೆಯ ಸಂಸ್ಕೃತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ನಡೆಯಿತು.

ಹೆಬ್ರಿ ಪಿಆರ್‌ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮೇಧಾ ಉಡುಪ, ಭೂಮಿಕಾಎಸ್, ಸಮೀಕ್ಷಾ ಎನ್, ಸುಮಿತಾಬಾಯರಿ, ನಮಿತಾ, ಪದ್ಮಜಾ, ಸಿಂಚನಾಎಸ್ಭಟ್, ಶ್ರೀನಿಧಿನಾಯಕ್, ಪವನ್ಹೆಬ್ಬಾರ್, ವೇದಾನಂದ ಶರ್ಮಾ ಹಾಗೂ ಪ್ರಣಮ್ಜಿ ಪೂಜಾರಿ ಅವರನ್ನು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಗೌರವಿಸಿದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ, ಡಯಟ್ ಉಪ ಪ್ರಾಂಶುಪಾಲ ಅಶೋಕ್ ಕಾಮತ್, ಯಲ್ಲಮ್ಮ, ಮಧುಸೂದನ ಭಟ್, ಪ್ರಭಾಕರ್ ಭಟ್, ಅಶೋಕ್ ಹೆಗಡೆ, ಹೆಬ್ರಿ ಅಮೃತ ಭಾರತಿ ವಿದ್ಯಾಲಯದ ಸಂಸ್ಕೃತ ಶಿಕ್ಷಕ ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT