ಲಿಯಾನ್, ಸ್ಪೇನ್: ಭಾರತದ ಲೋಕನಾಥನ್ ಧನುಷ್ ಇಲ್ಲಿ ನಡೆದ ವಿಶ್ವ ಜೂನಿಯರ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗಳಿಸಿದರು.

ವಿಶ್ವ ಜೂನಿಯರ್ ವೇಟ್‌ಲಿಫ್ಟಿಂಗ್‌ನ ಪುರುಷರ ವಿಭಾಗದಲ್ಲಿ ಪದಕ ಸಾಧನೆ ಮಾಡಿದ ಭಾರತದ ಮೊದಲ ಲಿಫ್ಟರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು.

17 ವರ್ಷದ ಧನುಷ್ ಒಟ್ಟು 231 ಕೆ.ಜಿ ತೂಕ ಎತ್ತಿದರು. ಸ್ನ್ಯಾಚ್‌ನಲ್ಲಿ 107 ಕೆ.ಜಿ. ಎತ್ತಿದರು. ಕ್ಲೀನ್ ಮತ್ತು ಜರ್ಕ್‌ನಲ್ಲಿ 124 ಕೆ.ಜಿ. ಎತ್ತಿದರು.

ವಿಯೆಟ್ನಾಂ ದೇಶದ ಕೆ. ಡಾಂಗ್ (253 ಕೆ.ಜಿ) ಮತ್ತು ಜಪಾನ್‌ನ ತೊಮಾರಿ ಕೊಟಾರು (247 ಕೆ.ಜಿ.) ಅವರು ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಗಳಿಸಿದರು.

ಮಹಿಳೆಯರ ವಿಭಾಗದಲ್ಲಿ ಭಾರತದ ಪಾಯಲ್ 6ನೇ ಸ್ಥಾನ ಪಡೆದರು. 45 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ಅವರು 150 ಕೆ.ಜಿ. ಭಾರ ಎತ್ತಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.