ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ ಮಲ್ಲಿಗೆ: ಹೆಚ್ಚಿದ ಇಳುವರಿ; ಇಳಿದ ಧಾರಣೆ

Published 9 ಮೇ 2024, 8:12 IST
Last Updated 9 ಮೇ 2024, 8:12 IST
ಅಕ್ಷರ ಗಾತ್ರ

ಶಿರ್ವ: ಬಿರುಬಿಸಿಲಿನ ತಾಪದಲ್ಲಿ ಉಡುಪಿ ಮಲ್ಲಿಗೆ (ಶಂಕರಪುರ ಮಲ್ಲಿಗೆ) ಇಳುವರಿ ಹೆಚ್ಚಾಗಿದ್ದು ಮಾರುಕಟ್ಟೆಯಲ್ಲಿ ಧಾರಣೆ ಧಿಡೀರ್‌ ಕುಸಿದಿದೆ.

ಕರಾವಳಿಯಲ್ಲಿ ಮದುವೆ ಮತ್ತಿತರ ಶುಭಕಾರ್ಯಗಳ ಸೀಸನ್ ಮುಗಿದಿದೆ. ಹೀಗಾಗಿ ನಾಲ್ಕು ಚೆಂಡುಗಳ ಒಂದು ಅಟ್ಟಿ ಮಲ್ಲಿಗೆಯು ಮಲ್ಲಿಗೆ ಕಟ್ಟೆಯಲ್ಲಿ ಬುಧವಾರ ₹ 220ಕ್ಕೆ ಸಿಗುತ್ತಿತ್ತು. ಮದುವೆ ಸೀಸನ್‌ನಲ್ಲಿ ಒಂದು ಅಟ್ಟಿಗೆ ₹ 450ರಿಂದ ₹ 850 ವರೆಗೆ ದರ ಏರಿತ್ತು.

ಉಡುಪಿ ಮಲ್ಲಿಗೆ ಜಿಐ ಮಾನ್ಯತೆ ಪಡೆದಿದೆ. ಮಲ್ಲಿಗೆ ಗಿಡದಲ್ಲಿ ಬಿಸಿಲಿನ ವಾತಾವರಣದಲ್ಲಿ ಹೆಚ್ಚು ಮೊಗ್ಗುಗಳು ಚಿಗುರೊಡೆಯುತ್ತಿವೆ. ಹಾಗಾಗಿ ಹೂವಿನ ಮಾರುಕಟ್ಟೆಗಳಿಗೆ ನೂರಾರು ಅಟ್ಟಿ ಮಲ್ಲಿಗೆ ಲಗ್ಗೆ ಇಟ್ಟಿದೆ. ಅಗ್ಗದ ಬೆಲೆಯಲ್ಲಿ ದೊರೆಯುತ್ತಿರುವ ಮಲ್ಲಿಗೆಗೆ ಗ್ರಾಹಕರು ಮುಗಿಬೀಳುತ್ತಿದ್ದು ಲಾಭ ಇಲ್ಲದ್ದರಿಂದ ಬೆಳೆಗಾರರು ಬೇಸರಗೊಂಡಿದ್ದಾರೆ. ಕೆಲವೊಮ್ಮೆ ಇಳುವರಿ ಹೆಚ್ಚಾದರೂ ನಷ್ಟ, ಕಡಿಮೆ ಆದರೂ ನಷ್ಟ ಎನ್ನುತ್ತಾರೆ ಕೃಷಿಕ ಹರೀಶ್ ಬಂಟಕಲ್.

ಮಲ್ಲಿಗೆ ವ್ಯಾಪಾರ ಮದುವೆ ಸೀಸನ್‌ನಲ್ಲಿ ಲಾಭದಾಯಕ. ಈ ಬಾರಿ ಮದುವೆ ಸೀಸನ್ ಮೇ ಮೊದಲ ವಾರದಲ್ಲೇ ಕೊನೆಯಾಗಿದೆ. ಈಗ ಇಳುವರಿ ಹೆಚ್ಚಿದೆ. ಆದರೆ ಕೊಳ್ಳುವವರಿಲ್ಲದ್ದರಿಂದ ಗಿಡದಲ್ಲೇ ಮಲ್ಲಿಗೆ ಹೂ ಬಿಟ್ಟುಬಿಡುವಂತಾಗಿದೆ ಎನ್ನುತ್ತಾರೆ ಹೂವಿನ ವ್ಯಾಪಾರಿ ಆರಿಫ್ ಸರಕಾರಿ ಗುಡ್ಡೆ.

ಮುಂಬಯಿ ಮಾರುಕಟ್ಟೆಯಲ್ಲೂ ಬೇಡಿಕೆ ಇಲ್ಲ

ಮಲ್ಲಿಗೆ ಇಳುವರಿ ಹೆಚ್ಚಾದರೆ ಮಾರಾಟಗಾರರಿಗೆ ಲಾಭ ದೊರಕುವುದಿಲ್ಲ. ಮದುವೆ ಸೀಸನ್ ಮುಗಿದ ಕಾರಣ ಎಲ್ಲ ಪ್ರದೇಶಗಳಿಂದಲೂ ಗ್ರಾಹಕರ ಕೊರತೆಯಾಗಿದೆ. ಮುಂಬಯಿ ಮಾರುಕಟ್ಟೆಯಲ್ಲಿ ಕೂಡಾ ಸದ್ಯ ಮಲ್ಲಿಗೆಗೆ ಬೇಡಿಕೆ ಕಡಿಮೆಯಾಗಿದೆ ಎನ್ನುತ್ತಾರೆ ಮಲ್ಲಿಗೆ ವ್ಯಾಪಾರಿ ಅಕ್ಷಯ್ ಕುಲಾಲ್ ಇನ್ನಂಜೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT