ಕುಂದಾಪುರ: ‘ಗ್ರಾಹಕರ ಸೇವೆ ಬ್ಯಾಂಕಿನ ಪ್ರಥಮ ಆದ್ಯತೆಯಾಗಿರಬೇಕು. ಅವರ ಅಪೇಕ್ಷೆಯಂತೆ ಹೆಚ್ಚಿನ ಸೌಲಭ್ಯ ನೀಡುವಂತಾಗಬೇಕು. ಆಗ ಮಾತ್ರ ಗ್ರಾಹಕರಿಗೆ ನಮ್ಮ ಬ್ಯಾಂಕ್ ಎಂದು ವಿಶ್ವಾಸ ಬರುತ್ತದೆ ಎನ್ನುವ ದೃಢತೆಯಲ್ಲಿ ಕರ್ಣಾಟಕ ಬ್ಯಾಂಕ್ ಅಗ್ರ ಸ್ಥಾನಕ್ಕೆರುತ್ತಿದೆ’ ಎಂದು ಕರ್ಣಾಟಕ ಬ್ಯಾಂಕಿನ ನಿಕಟಪೂರ್ವ ಎಂ. ಡಿ., ಸಿ.ಇ.ಒ ಮಹಾಬಲೇಶ್ವರ ಎಂ. ಎಸ್ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿನ ರೋಟರಿ ಲಕ್ಷ್ಮೀ ನರಸಿಂಹ ಕಲಾ ಮಂದಿರದಲ್ಲಿ ಕರ್ಣಾಟಕ ಬ್ಯಾಂಕ್ ಗ್ರಾಹಕರು ಹಾಗೂ ಅಭಿನಂದನಾ ಸಮಿತಿ ನೇತೃತ್ವದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.

‘ನೂರು ವರ್ಷ ದಾಟಿದ ಬ್ಯಾಂಕ್‌ಗಳಲ್ಲಿ ಕರ್ಣಾಟಕ ಬ್ಯಾಂಕ್ ಮಾತ್ರ ಪ್ರತಿವರ್ಷ ಲಾಭದಾಯಕವಾಗಿ ಬೆಳೆದು ದಾಖಲೆ ನಿರ್ಮಿಸಿದೆ. ಬ್ಯಾಂಕ್ ಸ್ಥಾಪಕರು ಲಾಭದ ಒಂದಂಶ ಸಮಾಜದ ಅಭಿವೃದ್ಧಿಗಾಗಿ ಬಳಸಬೇಕು ಎಂದು ಸೂಚಿಸಿದ್ದರು. ಅದರಂತೆ ಇಂದು ಕರ್ಣಾಟಕ ಬ್ಯಾಂಕ್ ಸಮಾಜಮುಖಿ ಬ್ಯಾಂಕ್ ಆಗಿ ಗುರುತಿಸಲ್ಪಟ್ಟಿದೆ. ಈ ಸಾಧನೆಗೆ ಗ್ರಾಹಕರು, ಸಿಬ್ಬಂದಿ ವರ್ಗದವರೂ ಕಾರಣ. ಕರ್ಣಾಟಕ ಬ್ಯಾಂಕ್ ಅನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಮಾದರಿ ಬ್ಯಾಂಕ್ ಆಗಿ ಬೆಳೆಯಲು ಎಲ್ಲರೂ ಕಟಿಬದ್ಧರಾಗಿ ಸೇವೆ ಸಲ್ಲಿಸುವಂತಾಗಲಿ’ ಎಂದರು.

ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ವಹಿಸಿದ್ದರು.

ಕರ್ಣಾಟಕ ಬ್ಯಾಂಕ್ ಮಾಜಿ ಅಧ್ಯಕ್ಷ ಪಿ. ಜಯರಾಮ ಭಟ್, ಕರ್ಣಾಟಕ ಬ್ಯಾಂಕ್ ನಿರ್ದೇಶಕ ಬಾಲಕೃಷ್ಣ ಅಲ್ಸೆ ಇದ್ದರು.

ಆನೆಗುಡ್ಡೆ ವಿನಾಯಕ ದೇವಸ್ಥಾನದ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ ಅವರು, ಮಹಾಬಲೇಶ್ವರ ಎಂ. ಎಸ್ ಅವರನ್ನು ಸನ್ಮಾನಿಸಿದರು. ನೇತ್ರಾವತಿ ಭಟ್, ಮೇಘಾ ಸಚಿನ್ ಅವರು ಅನ್ನಪೂರ್ಣ ಮಹಾಬಲೇಶ್ವರ ಅವರನ್ನು ಗೌರವಿಸಿದರು.

ಇದೇ ಸಂದರ್ಭದಲ್ಲಿ ಕರ್ಣಾಟಕ ಬ್ಯಾಂಕ್‍ನ 100 ವರ್ಷಗಳ ಬೆಳವಣಿಗೆಯ ಇತಿಹಾಸದ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.

ಅಭಿನಂದನಾ ಸಮಿತಿ ಸಂಚಾಲಕ ಕೆ.ಸೀತಾರಾಮ ನಕ್ಕತ್ತಾಯ ಸ್ವಾಗತಿಸಿದರು. ಹಟ್ಟಿಯಂಗಡಿ ಸಿದ್ಧಿ ವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ಎಚ್.ಬಾಲಚಂದ್ರ ಭಟ್ ಸನ್ಮಾನ ಪತ್ರ ವಾಚಿಸಿದರು. ಪ್ರಭಾಕರ ಶೆಟ್ಟಿ, ವಾಸುದೇವ ಹಂದೆ, ಅಮೃತ ತೌಳ, ಸಚಿನ್ ನಕ್ಕತ್ತಾಯ ಅತಿಥಿಗಳನ್ನು ಗೌರವಿಸಿದರು. ಹಿರಿಯ ಪತ್ರಕರ್ತ ಯು.ಎಸ್.ಶೆಣೈ ನಿರೂಪಿಸಿದರು. ಉದ್ಯಮಿ ಸುಪ್ರೀತ ಚಾತ್ರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.