ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ: ಮಲ್ಪೆ ದಕ್ಕೆಗೆ ಬೇಕು ಇನ್ನಷ್ಟು ಕಣ್ಗಾವಲು

ಏಷ್ಯಾದ ಅತಿ ದೊಡ್ಡ ಸರ್ವ ಋತು ಮೀನುಗಾರಿಕಾ ಬಂದರಿಗಿಲ್ಲ ಸೂಕ್ತ ಭದ್ರತೆ
ನವೀನ್‌ ಕುಮಾರ್ ಜಿ.
Published : 21 ಅಕ್ಟೋಬರ್ 2024, 7:39 IST
Last Updated : 21 ಅಕ್ಟೋಬರ್ 2024, 7:39 IST
ಫಾಲೋ ಮಾಡಿ
Comments
ಬಂದರಿನೊಳಗಿನ ಮೀನು ಮಾರುಕಟ್ಟೆ
ಬಂದರಿನೊಳಗಿನ ಮೀನು ಮಾರುಕಟ್ಟೆ
ಮಲ್ಪೆ ಮೀನುಗಾರಿಕಾ ಬಂದರಿನೊಳಗೆ ಮೀನಿಗಾಗಿ ಕಾಯುತ್ತಿರುವ ವಾಹನ
ಮಲ್ಪೆ ಮೀನುಗಾರಿಕಾ ಬಂದರಿನೊಳಗೆ ಮೀನಿಗಾಗಿ ಕಾಯುತ್ತಿರುವ ವಾಹನ
ಮಲ್ಪೆಯ ಮೀನುಗಾರಿಕಾ ಬಂದರಿನಲ್ಲಿ ಭದ್ರತೆಗೆ ಆದ್ಯತೆ ನೀಡಲು ಕರಾವಳಿ ಕಾವಲುಪಡೆ ಮತ್ತು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈಗಾಗಲೇ ಈ ಇಲಾಖೆಗಳು ಕಾರ್ಮಿಕರ ಮಾಹಿತಿ ಕಲೆ ಹಾಕಿವೆ
ಕೆ. ವಿದ್ಯಾಕುಮಾರಿ ಜಿಲ್ಲಾಧಿಕಾರಿ
‘ಕಾರ್ಮಿಕರ ದತ್ತಾಂಶ ಸಂಗ್ರಹಿಸುತ್ತೇವೆ’
ಮಿಶ್ ಮಿಲ್‌ ಮತ್ತು ಬೋಟ್‌ಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಮಾಹಿತಿಯನ್ನು ನಾವು ನಿರಂತರವಾಗಿ ಮಾಲಕರಿಂದ ಪಡೆದುಕೊಳ್ಳುತ್ತಿದ್ದೇವೆ. ಹೊರ ರಾಜ್ಯಗಳ ಕಾರ್ಮಿಕರು ಎಷ್ಟು ಮಂದಿ ಇದ್ದಾರೆ ಎಂಬ ದತ್ತಾಂಶ ಪಡೆದು ಆ ಕಾರ್ಮಿಕರ ಆಧಾರ್‌ ಕಾರ್ಡ್‌ ಮತದಾರರ ಚೀಟಿ ಪರಿಶೀಲಿಸುತ್ತೇವೆ. ಈಗ ಈ ಪ್ರಕ್ರಿಯೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದೇವೆ ಎಂದು ಕರಾವಳಿ ಕಾವಲು ಪಡೆಯ ವರಿಷ್ಠಾಧಿಕಾರಿ ಮಿಥುನ್‌ ಎಚ್‌.ಎನ್. ತಿಳಿಸಿದರು. ಕಡಲು ಮಾರ್ಗವಾಗಿ ನಮ್ಮಲ್ಲಿಗೆ ಅಕ್ರಮ ವಲಸಿಗರು ಬಂದಿರುವ ಪ್ರಕರಣಗಳು ಇದುವರೆಗೆ ದಾಖಲಾಗಿಲ್ಲ. ಕೋಸ್ಟ್‌ ಗಾರ್ಡ್‌ ಕಣ್ತಪ್ಪಿಸಿ ಬರುವುದು ಸಲಭವಲ್ಲ. ಸಮುದ್ರದಲ್ಲಿ 5 ನಾಟಿಕಲ್‌ ಮೈಲ್‌ವರೆಗೆ ನಮ್ಮ ಇಲಾಖೆ ಬೋಟ್‌ಗಳು ಗಸ್ತು ನಡೆಸುತ್ತವೆ. ಅಲ್ಲದೆ ಕರಾವಳಿ ನಿಯಂತ್ರಣ ದಳದವರು ಸ್ಥಳೀಯ ಮೀನುಗಾರರೇ ಆಗಿರುವುದರಿಂದ ಹೊರಗಿನವರು ಯಾರಾದರೂ ಬಂದರೆ ಅವರಿಗೆ ತಿಳಿಯುತ್ತೆ. ಅವರು ನಮಗೆ ಮಾಹಿತಿ ನಿಡುತ್ತಾರೆ ಎಂದು ವಿವರಿಸಿದರು. ಕಾರವಾರದಿಂದ ತಲಪಾಡಿ ವರೆಗಿನ 320 ಕಿ.ಮೀ. ವ್ಯಾಪ್ತಿಯಲ್ಲಿ ನಮ್ಮ ಬೋಟ್‌ಗಳು ಗಸ್ತು ನಡೆಸುತ್ತವೆ. ನಮ್ಮಲ್ಲಿ 9 ಪೊಲೀಸ್‌ ಠಾಣೆಗಳಿದ್ದು 13 ಬೋಟ್‌ಗಳನ್ನು ಗಸ್ತು ಕಾರ್ಯಕ್ಕೆ ಬಳಸಲಾಗುತ್ತಿದೆ. ರಾತ್ರಿ ಕೂಡ ಗಸ್ತು ನಡೆಸಲಾಗುತ್ತದೆ. ಮಲ್ಪೆ ಬಂದರಿನಲ್ಲೂ ಪ್ರತಿದಿನ ಗಸ್ತು ಕಾರ್ಯ ನಡೆಯುತ್ತಿದೆ ಎಂದು ಅವರು ಹೇಳಿದರು.
‘ವಾಹನಗಳ ಪರಿಶೀಲನೆಯೂ ನಡೆಯಲಿ’
ಮಲ್ಪೆ ಬಂದರಿನಲ್ಲಿ ಕೆಲವು ಕಡೆಯಷ್ಟೇ ಸಿ.ಸಿ.ಟಿ.ವಿ. ಕ್ಯಾಮೆರಾಗಳು ಇವೆ. ಅವುಗಳಲ್ಲೂ ಕೆಲವು ಕಾರ್ಯ ನಿರ್ವಹಿಸುವುದಿಲ್ಲ. ಈ ಬಂದರಿಗೆ ಬೇರೆ ಬೇರೆ ರಾಜ್ಯದವರು ಬರುತ್ತಾರೆ. ಅವರು ನಿಜಕ್ಕೂ ಎಲ್ಲಿನವರು ಎಂಬುದು ನಮಗೆ ತಿಳಿಯುವುದಿಲ್ಲ. ಈ ಕುರಿತು ಸಂಬಂಧಪಟ್ಟ ಇಲಾಖೆಯವರು ಹೆಚ್ಚಿನ ಪರಿಶೀಲನೆ ನಡೆಸಬೇಕು. ಹೊರಗಿನಿಂದ ಬರುವವರ ಗುರುತಿನ ಚೀಟಿಗಳನ್ನು ಪರಿಶೀಲಿಸಿ ದೃಢೀಕರಿಸಬೇಕು. ಮಳೆಗಾಲದಲ್ಲಿ ಲಕ್ಷಾಂತರ ಮೌಲ್ಯದ ಬೋಟ್‌ಗಳು ಬಂದರಿನಲ್ಲಿ ನಿಲುಗಡೆಯಾಗುತ್ತವೆ. ಆ ಸಂದರ್ಭದಲ್ಲಿ ಹೆಚ್ಚಿನ ಭದ್ರತೆ ಒದಗಿಸಬೇಕು ಎನ್ನುತ್ತಾರೆ ಮಲ್ಪೆ ತಾಂಡೇಲರ ಸಂಘದ ಅಧ್ಯಕ್ಷ ರವಿರಾಜ್‌ ಸುವರ್ಣ. ಬಂದರಿಗೆ ಹೊರ ರಾಜ್ಯಗಳ ವಾಹನಗಳೂ ಸಾಕಷ್ಟು ಸಂಖ್ಯೆಯಲ್ಲಿ ಬರುತ್ತವೆ. ಅವುಗಳ ಪರಿಶೀಲನೆ ಸೂಕ್ತ ರೀತಿಯಲ್ಲಿ ನಡೆಯುವುದಿಲ್ಲ. ಅದನ್ನು ಇನ್ನಷ್ಟು ಹೆಚ್ಚಿಸಬೇಕು. ಇಂತಹ ವಾಹನಗಳಲ್ಲಿ ಎಲ್ಲಿಯವರು ಬರುತ್ತಾರೆ ಎಂಬುದೇ ತಿಳಿಯುವುದಿಲ್ಲ ಕೇಳಿದರೆ ಅಸ್ಸಾಂ ಛತ್ತೀಸಗಡ ಒಡಿಶಾ ಎನ್ನುತ್ತಾರೆ ಎಂದು ಅವರು ತಿಳಿಸಿದರು.
‘ಬಂದರು ಪ್ರವೇಶಿಸುವ ಮುನ್ನ ಅನುಮತಿ ಅಗತ್ಯ’
ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ರಿಪೇರಿ ಅಗತ್ಯವಿದ್ದಾಗ ಹಾಗೂ ಹವಾಮಾನ ವೈಪರೀತ್ಯದ ವೇಳೆ ಹೊರ ರಾಜ್ಯಗಳ ಬೋಟ್‌ಗಳು ಮಲ್ಪೆ ಬಂದರಿಗೆ ಬರುತ್ತವೆ. ಆ ಬೋಟ್‌ಗಳಲ್ಲಿರುವವರು ಬಂದರು ಪ್ರವೇಶಿಸುವ ಮುನ್ನ ಅವರ ರಾಜ್ಯಗಳ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಮಾಹಿತಿ ನೀಡುತ್ತಾರೆ. ಅವರು ನಮಗೆ ತಿಳಿಸುತ್ತಾರೆ. ಬಳಿಕ ನಾವು ಅನುಮತಿ ನಿಡುತ್ತೇವೆ ಎಂದು ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ವಿವೇಕ್‌ ಆರ್‌. ಆಳ್ವ ತಿಳಿಸಿದರು. ಯಾವುದೇ ಅನುಮತಿ ಪಡೆಯದೆ ದಕ್ಕೆಗೆ ಅಕ್ರಮ ಪ್ರವೇಶ ಮಾಡಿದರೆ ಅಂತಹ ಬೋಟ್‌ಗಳಲ್ಲಿರುವವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ಟ್ರಾಲ್‌ ಬೋಟ್‌ಗಳಲ್ಲಿ ಎಷ್ಟು ಮಂದಿ ಮೀನುಗಾರಿಕೆಗೆ ತೆರಳುತ್ತಿದ್ದಾರೆ ಎಂಬ ಮಾಹಿತಿಯನ್ನು ಅವರು ಡೀಸೆಲ್‌ ಬಂಕ್‌ಗಳಿಗೆ ನೀಡುತ್ತಾರೆ. ಅಲ್ಲಿಂದ ಅವರ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT