ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ: ಏಳು ಮಂದಿ ಬಾಂಗ್ಲಾದೇಶೀಯರು ವಶಕ್ಕೆ

Published : 12 ಅಕ್ಟೋಬರ್ 2024, 7:15 IST
Last Updated : 12 ಅಕ್ಟೋಬರ್ 2024, 7:15 IST
ಫಾಲೋ ಮಾಡಿ
Comments

ಉಡುಪಿ: ಮಲ್ಪೆಯ ವಡಬಾಂಡೇಶ್ವರದ ಬಸ್‌ ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಏಳು ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನು ಮಲ್ಪೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಾಂಗ್ಲಾದೇಶದ ಪ್ರಜೆಗಳಾದ ಹಕೀಂ, ಸುಜೋನ್‌ ಎಸ್‌.ಕೆ., ಇಸ್ಮಾಯಿಲ್‌ ಎಸ್‌.ಕೆ. , ಕರೀಮ್‌ ಎಸ್‌.ಕೆ. , ಸಲಾಂ ಎಸ್‌.ಕೆ., ರಾಜಿಕುಲ್‌ ಎಸ್‌.ಕೆ.,ಮೊಹಮ್ಮದ್‌ ಸೋಜುಬ್‌ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ನಕಲಿ ಆಧಾರ್‌ ಕಾರ್ಡ್ ಸೃಷ್ಟಿಸಿ ಇವರು ಸುಮಾರು 3 ವರ್ಷಗಳಿಂದ ಇಲ್ಲಿ ನೆಲೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇವರಿಗೆ ನಕಲಿ ಆಧಾರ್‌ ಕಾರ್ಡ್‌ ಮಾಡಿಸಿಕೊಟ್ಟಿರುವ ಆರೋಪದಲ್ಲಿ ಸಿಕ್ಕಿಂನ ಅಗರ್ತಲಾದ ಕಾಜೋಲ್‌ ಹಾಗೂ ಇವರನ್ನು ಕೆಲಸಕ್ಕೆ ಕರೆ ತಂದಿದ್ದ ಬಾಂಗ್ಲಾದೇಶದ ಉಸ್ಮಾನ್‌ ವಿರುದ್ಧ ಪ್ರಕರಣ ದಾಖಲಾಗಿದೆ.

‘ನಕಲಿ ಪಾಸ್‌ಪೋರ್ಟ್‌ ಬಳಸಿ ಮಂಗಳೂರಿನ ವಿಮಾನ ನಿಲ್ದಾಣದ ಮೂಲಕ ದುಬೈಗೆ ತೆರಳಲು ಪ್ರಯತ್ನಿಸಿದ್ದ ಮೊಹಮ್ಮದ್‌ ಮಾಣಿಕ್‌ ಎಂಬಾತನನ್ನು ವಲಸೆ ವಿಭಾಗದ ಅಧಿಕಾರಿಗಳು ಬಜ್ಪೆ ಪೊಲೀಸರಿಗೊಪ್ಪಿಸಿದ್ದರು. ಆತನನ್ನು ವಿಚಾರಣೆ ನಡೆಸಿ‌ದಾಗ ಮಲ್ಪೆಯ ಹೂಡೆಯಲ್ಲಿ ಬಾಂಗ್ಲಾದೇಶೀಯರು ಅಕ್ರಮವಾಗಿ ನೆಲೆಸಿರುವ ಮಾಹಿತಿ ದೊರಕಿದೆ. ಅದರಂತೆ ಏಳು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ.ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT