ಉಡುಪಿ: ಕಲೆ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಆರಂಭವಾಗಿರುವ ನಿರಂತರ್ ಉದ್ಯಾವರ ಸಂಘಟನೆಯ ಮೂರನೇ ವರ್ಷದ ಮೂರು ದಿನಗಳ ನಿರಂತರ ನಾಟಕೋತ್ಸವವನ್ನು ಈಚೆಗೆ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಪ್ರಧಾನ ಧರ್ಮಗುರು ಸ್ಟ್ಯಾನಿ ಬಿ. ಲೋಬೊ ಉದ್ಘಾಟಿಸಿದರು.

ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ರಂಗಮಂದಿರದ ವೇದಿಕೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾಟಕ ಅತ್ಯುತ್ತಮ ಮಾಧ್ಯಮವಾಗಿದ್ದು, ಸಮಾಜದಲ್ಲಿ ಘಟಿಸುವ ಘಟನೆಗಳನ್ನು ನಾಟಕಕಾರ ನಟನೆಯ ಮೂಲಕ ತೋರಿಸುವಾಗ ಹೆಚ್ಚು ಪರಿಣಾಮಕಾರಿಯಾಗಿರುತ್ತವೆ. ಸಮಾಜವನ್ನು ಬದಲಿಸುವ ಶಕ್ತಿ ನಾಟಕಗಳಿಗೆ ಇದೆ ಎಂದರು.

ಲೇಖಕ ಕಿಶೋರ್ ಗೊನ್ಸಾಲ್ವಿಸ್ ಶುಭ ಹಾರೈಸಿದರು. ಉದ್ಯಮಿಗಳಾದ ಎರಿಕ್ ಡಿಸೋಜಾ ಪೆರಂಪಳ್ಳಿ, ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಸಹಾಯಕ ಧರ್ಮಗುರು ರೊಲ್ವಿನ್ ಅರಾನ್ನಾ, 20 ಆಯೋಗಗಳ ಸಂಚಾಲಕ ಗೋಡ್ಫ್ರಿ ಡಿಸೋಜಾ, ನಾಟಕೋತ್ಸವದ ಸಂಚಾಲಕರಾದ ರೊನಾಲ್ಡ್ ಡಿಸೋಜಾ ಉಪಸ್ಥಿತರಿದ್ದರು.

ಈಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾದ ನಿರಂತರ ಉದ್ಯಾವರ ಸಂಘಟನೆಯ ಜುಡಿತ್ ಪಿರೇರಾ ಅವರನ್ನು ಸನ್ಮಾನಿಸಲಾಯಿತು. ನಿರಂತರ ಉದ್ಯಾವರ ಸಂಘಟನೆಯ ಅಧ್ಯಕ್ಷ ಸ್ಟೀವನ್ ಕುಲಾಸೊ ಸ್ವಾಗತಿಸಿದರು. ನಿರ್ದೇಶಕ ರೋಶನ್ ಡಿಸೋಜಾ ಧನ್ಯವಾದ ಸಮರ್ಪಿಸಿದರು. ಕಾರ್ಯದರ್ಶಿ ಒಲಿವಿರಾ ಮಥಾಯಸ್ ಕಾರ್ಯಕ್ರಮ ನಿರೂಪಿಸಿದರು.

3 ದಿನದ ನಾಟಕೋತ್ಸವದಲ್ಲಿ ಮಂಗಳೂರಿನ ಅಸ್ತಿತ್ವ ತಂಡದ ಏಕ್ ಪಯ್ಣಾರಿ ಮತ್ತು ಗೀತ್ ಹಾಗೂ ಶಂಕರಪುರದ ಕಲಾರಾಧನ ತಂಡದ ಲಿಗೋರಿ ಮಾಸ್ಟರ್ ನಾಟಕಗಳು ಪ್ರದರ್ಶನಗೊಳ್ಳಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.