ಉಡುಪಿ: ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಬುಧವಾರ ದೆಹಲಿಯಲ್ಲಿ ಬಿಜೆಪಿ ಹಿರಿಯ ಧುರೀಣ ಎಲ್.ಕೆ. ಅಡ್ವಾಣಿ ಅವರನ್ನು ಭೇಟಿಮಾಡಿ ಯೋಗಕ್ಷೇಮ ವಿಚಾರಿಸಿದರು.

ಅಯೋಧ್ಯೆ ರಾಮಜನ್ಮಭೂಮಿ ಆಂದೋಲನದಲ್ಲಿ ಅಡ್ವಾಣಿ ಅವರ ಪಾತ್ರದ ಬಗ್ಗೆ ಚರ್ಚಿಸಿದ ಶ್ರೀಗಳು ಅಂದಿನ ಹೋರಾಟದ ಫಲವಾಗಿ ಭವ್ಯವಾದ ರಾಮಮಂದಿರ ನಿರ್ಮಾಣಗೊಳ್ಳುವಂತಾಗಿದೆ ಎಂದು ಅಡ್ವಾಣಿ ಅವರನ್ನು ಶ್ಲಾಘಿಸಿದರು.

ಈ ಸಂದರ್ಭ ಹಿರಿಯ ಯತಿಗಳಾದ ವಿಶ್ವೇಶತೀರ್ಥ ಶ್ರೀಗಳು ನೀಡಿದ ಸ್ಫೂರ್ತಿಯನ್ನು ಅಡ್ವಾಣಿ ಮನಸಾರೆ ಸ್ಮರಿಸಿದರು. ಕೃಷ್ಣನ ಗಂಧ ಪ್ರಸಾದ ಹಾಗೂ ಶಾಲು ಸ್ಮರಣಿಕೆ, ಫಲ ಮಂತ್ರಾಕ್ಷತೆಯನ್ನು ಸ್ವಾಮೀಜಿ ಅಡ್ವಾಣಿ ಅವರಿಗೆ ನೀಡಿದರು. ಈ ಸಂದರ್ಭ ಪುತ್ರಿ ಪ್ರತಿಭಾ ಅಡ್ವಾಣಿ ಹಾಗೂ ಕುಟುಂಬದ ಸದಸ್ಯರು ಇದ್ದರು.

ವಿದ್ವಾನ್ ದೇವಿಪ್ರಸಾದ್ ಭಟ್ವ, ವಿಷ್ಣುಮೂರ್ತಿ ಆಚಾರ್ಯ, ಕೃಷ್ಣ ಭಟ್ ಉಪಸ್ಥಿತರಿದ್ದರು .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.