ಉಡುಪಿ: ಹೆಬ್ರಿ ತಾಲ್ಲೂಕಿನ ಪೀತುಬೈಲ್ನಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡನ ಎನ್ಕೌಂಟರ್ ನಡೆದ ಮನೆಯ ಮಾಲೀಕ ಜಯಂತ ಗೌಡ ಅವರನ್ನು ಪೊಲೀಸರು ಠಾಣೆಗೆ ಕರೆಸಿದ್ದನ್ನು ಖಂಡಿಸಿ ಹೆಬ್ರಿ ಪೊಲೀಸ್ ಠಾಣೆಯ ಮುಂಭಾಗದಲ್ಲಿ ರಾಜ್ಯ ಮಲೆಕುಡಿಯ ಸಂಘದ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.

ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಪೊಲೀಸರು ಜಯಂತ ಗೌಡ ಅವರನ್ನು ಬಿಡುಗಡೆಗೊಳಿಸಿದರು.

ಈ ವೇಳೆ ಮಾತನಾಡಿದ ರಾಜ್ಯ ಮಲೆಕುಡಿಯ ಸಂಘದ ಅಧ್ಯಕ್ಷ ಶ್ರೀಧರ ಗೌಡ, ‘ಹಿಂಸಾತ್ಮಕ ಹೋರಾಟ ನಡೆಸುವವರಿಗೆ ಮತ್ತು ಸಂಘಟನೆಗಳಿಗೆ ನಮ್ಮ ವಿರೋಧವಿದೆ. ಆದರೆ ಮುಗ್ಧ ಜನರಿಗೆ ಪೊಲೀಸರು ಕಿರುಕುಳ ನೀಡಬಾರದು’ ಎಂದರು.

‘ವಿಕ್ರಂ ಗೌಡ ಎನ್ಕೌಂಟರ್ ನಡೆದ ಬಳಿಕ ಈ ಭಾಗದ ಜನರಿಗೆ ಪೊಲೀಸರಿಂದ ಕಿರುಕುಳ ಉಂಟಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಮುಂದೆ ಕಿರುಕುಳ ನೀಡಿದರೆ ಊರವರು ಸೇರಿ ಹೋರಾಟ ಮಾಡಲಿದ್ದೇವೆ’ ಎಂದು ಹೇಳಿದರು.

‘ಜಯಂತ ಗೌಡ ಅವರು ಮಾಹಿತಿ ಕೊಡಲಿಲ್ಲ ಎಂಬ ಕಾರಣಕ್ಕೆ ಅವರನ್ನು ಠಾಣೆಗೆ ಕರೆಸಿ ಕೂರಿಸಲಾಗಿದೆ ಎಂಬ ಮಾಹಿತಿ ಕೇಳಿ ನಾವು ಬಂದಿದ್ದೇವೆ’ ಎಂದರು.

‘ಹಿಂಸಾತ್ಮಕ ಚಟುವಟಿಕೆ ನಡೆಸಿ, ಶಾಂತಿಗೆ ಭಂಗ ತರುವ ಕೃತ್ಯಗಳು ನಡೆದಾಗ ಅದನ್ನು ದಮನ ಮಾಡಬೇಕು. ಅದಕ್ಕೆ ನಮ್ಮ ಸಹಕಾರ ಇದೆ. ಅದರ ನೆಪದಲ್ಲಿ ಮುಗ್ಧ ಜನರಿಗೆ ಹಿಂಸೆ ನೀಡಬಾರದು’ ಎಂದು ತಿಳಿಸಿದರು.

‘ಪೊಲೀಸರೊಂದಿಗೆ ನಾವು ಕೈಜೋಡಿಸುತ್ತೇವೆ. ಪೊಲೀಸರು ಕೂಡ ನಮ್ಮೊಂದಿಗೆ ಕೈಜೋಡಿಸಬೇಕು. ಜನರು ನಕ್ಸಲರಿಗೆ ಹೆದರಿ ಅಹಾರ ಕೊಡುತ್ತಾರೆ ವಿನಾಃ ಅವರ ಮೇಲಿನ ಅಭಿಮಾನದಿಂದಲ್ಲ ಎಂಬುದನ್ನು ಅಧಿಕಾರಿಗಳು ಮನಗಾಣಬೇಕು’ ಎಂದರು.

ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ ಗಂಗಾಧರ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪೊಲೀಸ್ ಠಾಣೆಯಿಂದ ಬಿಡುಗಡೆಗೊಂಡ ಬಳಿಕ ಮಾತನಾಡಿದ ಜಯಂತ ಗೌಡ, ‘ಪೊಲೀಸರು ಠಾಣೆಗೆ ಕರೆದು ನಿಮಗೆ ಏನಾಗಿದೆ ಎಂದು ಕೇಳಿದರು. ಬೇರೆ ಏನೂ ಕೇಳಲಿಲ್ಲ. ವಿದ್ಯುತ್ ಕಂಬದಿಂದ ಬಿದ್ದು ನನ್ನ ಮಗನ ಕೈಗೆ ಗಾಯವಾದ ಕಾರಣಕ್ಕೆ ಕೆಲವು ದಿನಗಳಿಂದ ನಾವು ಕಬ್ಬಿನಾಲೆಯ ಪುಲ್ಲಾಂತ್ಬೆಟ್ಟುವಿನಲ್ಲಿರುವ ಮಗಳ ಮನೆಯಲ್ಲಿದ್ದೇವೆ’ ಎಂದರು.

‘ಎನ್ಕೌಂಟರ್ ನಡೆದ ಬಗ್ಗೆ ನಮಗೆ ಟಿ.ವಿ. ಮೂಲಕ ಮಾಹಿತಿ ತಿಳಿಯಿತು. ನಕ್ಸಲರು ಬಂದಿರುವ ಬಗ್ಗೆ ನಮಗೆ ಏನೂ ಗೊತ್ತಿಲ್ಲ’ ಎಂದರು.

Quote - ನನ್ನ ಗಂಡನನ್ನು ಬೆಳಿಗ್ಗೆಯೇ ಪೊಲೀಸರು ಕರೆದುಕೊಂಡು ಹೋದರು. ಯಾಕೆ ಕರೆದುಕೊಂಡು ಹೋದರು ಎಂಬ ಮಾಹಿತಿ ನೀಡಲಿಲ್ಲ. ನಮಗೆ ಭಯವಾಗುತ್ತಿದೆ ಗಿರಿಜಾ ಜಯಂತ ಗೌಡ ಪತ್ನಿ

Quote - ಅಪ್ಪ ಯಾವ ತಪ್ಪು ಮಾಡಿಲ್ಲ. ನಕ್ಸಲರ ಬಂದಿರುವ ಬಗ್ಗೆ ಅವರಿಗೆ ಯಾವ ಮಾಹಿತಿಯೂ ಗೊತ್ತಿಲ್ಲ. ಅವರಿಗೆ ಪೊಲೀಸರು ಕಿರುಕುಳ ಕೊಡಬಾರದು ರಾಕೇಶ್ ಜಯಂತ ಗೌಡ ಪುತ್ರ

Quote - ಪೀತುಬೈಲಿನಲ್ಲಿ ಏನಾಗಿದೆ ಎಂಬುದು ಅಪ್ಪನಿಗೆ ಗೊತ್ತಿಲ್ಲ. ಅವರು ನನ್ನ ಮನೆಯಲ್ಲಿದ್ದರು. ಅವರಿಗೆ ತೊಂದರೆ ಕೊಡಬಾರದು ಮಾಲತಿ ಜಯಂತ ಗೌಡ ಪುತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.