ಉಡುಪಿ:ಅನುವಾದ ಸಾಹಿತ್ಯವನ್ನೊಳಗೊಂಡ ಭಾಷಾ ಕ್ಷೇತ್ರಕ್ಕೆ ದಶಕಗಳ ಕಾಲ ದುಡಿದಿರುವ ಜರ್ಮನ್ ಭಾಷಾತಜ್ಞ, ಬಹುಭಾಷಾ ಜ್ಞಾನಿ ಡಾ.ನೀರ್ಕಜೆ ತಿರುಮಲೇಶ್ವರ ಭಟ್ ಅವರು 2019ನೇ ಸಾಲಿನ ಸೇಡಿಯಾಪು ಕೃಷ್ಣ ಭಟ್ಟ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ₹10,000 ನಗದು ಹಾಗೂ ಫಲಕ ಒಳಗೊಂಡಿದೆ. ಜೂನ್ 8ರಂದು ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಂಯೋಜಕ ಪ್ರೊ.ವರದೇಶ ಹಿರೇಗಂಗೆ ತಿಳಿಸಿದ್ದಾರೆ.

ಎನ್.ಟಿ.ಭಟ್ಟ ಎಂದೇ ಪ್ರಸಿದ್ಧವಾಗಿರುವ ಡಾ.ನೀರ್ಕಜೆ ತಿರುಮಲೇಶ್ವರ ಭಟ್ಟರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ನೀರ್ಕಜೆಯಲ್ಲಿ ಜನಿಸಿದರು. ಎಂ.ಜಿ.ಎಂ ಕಾಲೇಜಿನಲ್ಲಿ ಪದವಿ, ಆಲಿಫರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಎಂ.ಎ (ಇಂಗ್ಲಿಷ್), ಕರ್ನಾಟಕ ವಿಶ್ವವಿದ್ಯಾಲಯದಲ್ಲಿಜರ್ಮನ್ ವಿಷಯದಲ್ಲಿಎಂ.ಎ ಮಾಡಿದ್ದಾರೆ.

ಮ್ಯೂನಿಚ್ ವಿಶ್ವವಿದ್ಯಾಲಯದಲ್ಲಿಗ್ರೋಸೆಸ್ ಶ್ಟ್ರಾಖ್ ಡಿಪ್ಲೊಮಾ, ಕರ್ನಾಟಕ ವಿಶ್ವವಿದ್ಯಾಲಯದಿಂದ ‘ಹೈನ್ ರಿಶ್ ಬೊಲ್ ಅವರ ಕೃತಿಗಳಲ್ಲಿ ಗಾಂಧಿ ತತ್ವ’ ಎಂಬ ವಿಷಯದಲ್ಲಿ ಪಿಎಚ್.ಡಿ ಪಡೆದಿದ್ದಾರೆ.

ಎಂ.ಜಿ.ಎಂ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ, ಜರ್ಮನ್ ಭಾಷಾ ಭೋಧಕ, ಅನುವಾದಕ, ದಾಖಲಾತಿ ತಂತ್ರಜ್ಞ, ವಿಮರ್ಶಕ, ಪತ್ರಿಕೆಗಳ ಯೋಜನೆ ಮತ್ತು ಸಂಪಾದಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ನಿರ್ದೇಶಕರಾಗಿಯೂ ದುಡಿದಿದ್ದಾರೆ.

ಕು.ಶಿ.ಹರಿದಾಸ ಭಟ್ಟ, ದೊರಕಿದ ದಾರಿ (ಆತ್ಮಕಥನ) ಶಾಸ್ತ್ರ-ಪ್ರಯೋಗ ಕೃತಿ, ಕನ್ನಡದಿಂದ ಜರ್ಮನಿಗೆ, ಇಂಗ್ಲೀಷ್‌ನಿಂದ ಕನ್ನಡಕ್ಕೆ, ಕನ್ನಡದಿಂದ ಇಂಗ್ಲೀಷಿಗೆ ಹಲವು ಗ್ರಂಥಗಳನ್ನು ಅನುವಾದಿಸಿದ್ದಾರೆ.ಜರ್ಮನ್ ರಾಷ್ಟ್ರಪತಿ ಅವರಿಂದ ಆರ್ಡರ್ ಆಫ್ ಮೆರಿಟ್ ಪುರಸ್ಕಾರ ಸಿಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.