ಸಾಸ್ತಾನ (ಬ್ರಹ್ಮಾವರ): 25ನೇ ಸ್ಟೇಟ್ ಮಾಸ್ಟರ್ ಸ್ವಿಮ್ಮಿಂಗ್ ಚಾಂಪಿಯನ್ಷಿಪ್ ಆಯೋಜಿಸಿದ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಗುಂಡ್ಮಿ ನಿವಾಸಿ ಗೋಪಾಲ ಖಾರ್ವಿ ಕೋಡಿಕನ್ಯಾಣ ಅವರು ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆ ಆಗಿದ್ದಾರೆ.

ಅವರು 400 ಮೀ. ಫ್ರೀಸ್ಟೈಲ್, 50 ಮೀ. ಬಟರ್ ಫ್ಲೈನಲ್ಲಿ ಚಿನ್ನದ ಪದಕ, 200 ಮೀ. ಫ್ರೀಸ್ಟೈಲ್, 100 ಮೀ. ಫ್ರೀಸ್ಟೈಲ್, 4x50 ಫ್ರೀಸ್ಟೈಲ್ ರಿಲೇ, 4x100 ಮಿಡ್ಲೆ ರಿಲೇಯಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ.

ಉಡುಪಿಯ ಅಜ್ಜರಕಾಡು ಈಜುಕೊಳದ ತರಬೇತುದಾರ ಆಗಿರುವ ಅವರು, 2013ರಲ್ಲಿ ಕೈ ಕಾಲುಗಳನ್ನು ಕೋಳದಿಂದ ಬಂಧಿಸಿ ಅರಬ್ಬೀ ಸಮುದ್ರದಲ್ಲಿ 3.71 ಕಿ.ಮೀ. ಈಜಿ ಗಿನ್ನಿಸ್ ವಿಶ್ವದಾಖಲೆ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.