ಬ್ರಹ್ಮಾವರ: ಮಲೇಷ್ಯಾದಲ್ಲಿ ನಡೆದ ಅಂತರ ಕ್ಲಬ್ ಥ್ರೋಬಾಲ್ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಂಡಿದ್ದ ಬ್ರಹ್ಮಾವರ ಎಸ್.ಎಂ.ಎಸ್ ಕಾಲೇಜಿನ ಬಿ.ಕಾಂ ಪ್ರಥಮ ವರ್ಷದ ವಿದ್ಯಾರ್ಥಿನಿ ವೈಷ್ಣವಿ ಜಿ. ಸುವರ್ಣ ಉತ್ತಮ ಸಾಧನೆ ಮಾಡಿದ್ದಾರೆ.

ಚಾಂಪಿಯನ್ಷಿಪ್ನಲ್ಲಿ ಭಾಗವಹಿಸಿದ್ದ ಭಾರತದ ವಿವಿಧ ಕ್ಲಬ್ಗಳಲ್ಲಿ ಆಡಿದ ಒಟ್ಟು 15 ಆಟಗಾರ್ತಿಯರಲ್ಲಿ ಒಬ್ಬರಾಗಿರುವ ಅವರು ಬೆಂಗಳೂರಿನ ಫ್ರೆಂಡ್ಸ್ ಸ್ಪೋರ್ಟ್ಸ್ ಅಕಾಡೆಮಿ ಪ್ರತಿನಿಧಿಸಿದ್ದರು. ರಾಜ್ಯ ಮಟ್ಟದ ವಿವಿಧ ಟೂರ್ನಿಗಳಲ್ಲಿ ಪಾಲ್ಗೊಂಡಿದ್ದು, ಮೂರು ಬಾರಿ ಚಾಂಪಿಯನ್ ತಂಡಗಳಲ್ಲಿ ಆಡಿದ್ದಾರೆ. ರಾಷ್ಟ್ರಮಟ್ಟದ ಟೂರ್ನಿಗಳಲ್ಲೂ ಭಾಗವಹಿಸಿದ್ದಾರೆ. ಜಾವೆಲಿನ್ ಥ್ರೋ, ಡಿಸ್ಕಸ್ ಥ್ರೋ, ಶಾಟ್ಪಟ್ನಲ್ಲೂ ಸಾಧನೆ ಮಾಡಿದ್ದಾರೆ. ಕೋಡಿಬೆಂಗ್ರೆಯ ಗೋವಿಂದ ಸುವರ್ಣ ಹಾಗೂ ಬೇಬಿ ದಂಪತಿಯ ಪುತ್ರಿಯಾಗಿರುವ ವೈಷ್ಣವಿ ಅವರನ್ನು ಬ್ರಹ್ಮಾವರದ ಒ.ಎಸ್.ಸಿ ಎಜುಕೇಷನಲ್ ಸೊಸೈಟಿ, ಎಸ್.ಎಂ.ಎಸ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್, ಕಾಲೇಜಿನ ಪ್ರಾಂಶುಪಾಲ ಡಾ.ಮಂಜುನಾಥ ಉಡುಪ ಕೆ, ದೈಹಿಕ ಶಿಕ್ಷಣ ನಿರ್ದೇಶಕ ವೆಂಕಟೇಶ ಭಟ್ ಅಭಿನಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.