ಕುಂದಾಪುರ: ‘ನಿರಂತರವಾಗಿ ಯಕ್ಷಗಾನ ಚಿಂತನೆಯಲ್ಲಿರುವ ಸಾಧಕರಿಗೆ ಪ್ರಶಸ್ತಿ ಸಂದಿದೆ. ಅರ್ಹ ವ್ಯಕ್ತಿಗಳಿಗೆ ಪ್ರಶಸ್ತಿ ದೊರೆತಾಗ ಪ್ರಶಸ್ತಿಗೆ ಗೌರವ ಹೆಚ್ಚಾಗುತ್ತದೆ. ಅನೇಕ ಮಕ್ಕಳನ್ನು ರಂಗಕ್ಕೆ ತಂದಿರುವ ಯಶಸ್ವೀ ಕಲಾವೃಂದ ಸಂಸ್ಥೆಯ ಕಾರ್ಯವನ್ನು ಸರ್ಕಾರವೂ ಗುರುತಿಸಬೇಕು’ ಎಂದು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ತೆಕ್ಕಟ್ಟೆ ಹಯಗ್ರೀವ ಸಭಾಭವನದಲ್ಲಿ ತೆಕ್ಕಟ್ಟೆ ಕೊಮೆಯ ಯಶಸ್ವೀ ಕಲಾವೃಂದದ ‘ಸಿನ್ಸ್ 1999 ಶ್ವೇತಯಾನ-76’ ಕಾರ್ಯಕ್ರಮದಡಿ, ಯಕ್ಷಗಾನ ಅಕಾಡೆಮಿಯ ಪ್ರಶಸ್ತಿಗೆ ಭಾಜನರಾದ ಗಣಪತಿ ಭಟ್ ಹಾಗೂ ಸುಜಯೀಂದ್ರ ಹಂದೆ ಕೋಟ ಅವರಿಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು.

ಪುರಸ್ಕೃತರನ್ನು ಗೌರವಿಸಿ ಮಾತನಾಡಿದ ಬಹು ಮೇಳಗಳ ಯಜಮಾನ ಪಿ.ಕಿಶನ್ ಹೆಗ್ಡೆ, ಮಕ್ಕಳ ಮೇಳ ಸಾಲಿಗ್ರಾಮ ವಿಶ್ವದಲ್ಲಿಯೇ ಗುರುತಿಸಿಕೊಂಡಿದೆ. ಅಂತಹ ಮೇಳವನ್ನು ಮುನ್ನಡೆಸುತ್ತಿರುವ ಸುಜಯೀಂದ್ರ ಹಂದೆ ಅವರಿಗೆ ‘ಯಕ್ಷ ದೀವಿಗೆ ಪುಸ್ತಕ ಪ್ರಶಸ್ತಿ’ ಲಭಿಸಿದೆ. ಹಾಗೆಯೇ ಗಣಪತಿ ಭಟ್ರೂ ವಿದ್ವತ್ತಿನಲ್ಲಿ ಪರಿಪೂರ್ಣರು. ಇವರಿಬ್ಬರಿಗೂ ಪ್ರಶಸ್ತಿ ಲಭಿಸಿದ್ದು ಯೋಗ್ಯವಾಗಿದೆ. ಯಶಸ್ವೀ ಕಲಾವೃಂದ ಪ್ರತಿವರ್ಷ ಪ್ರಶಸ್ತಿ ಪ್ರಧಾನ ಪೂರ್ವದಲ್ಲಿಯೇ ಅಭಿನಂದನೆಯನ್ನು ಸಲ್ಲಿಸಿಕೊಂಡು ಹೆಸರಾಗಿದೆ ಎಂದು ಹೇಳಿದರು.

ಸುಜಯೀಂದ್ರ ಹಂದೆ ಮಾತನಾಡಿ, ‘ಯಕ್ಷಗಾನದಲ್ಲಿ ತೆಗೆದಷ್ಟು ಮೊಗೆದಷ್ಟು ವಿಚಾರಗಳಿವೆ. ಜಗತ್ತಿನ ಎಲ್ಲ ಕಲೆಗಳಿಗಿಂತ ಶ್ರೇಷ್ಠವಾದ ಕಲೆ ಯಕ್ಷಗಾನವು ನಿಲ್ಲುತ್ತದೆ ಎನ್ನುವುದನ್ನು ಅಭಿಮಾನದಿಂದ ಹೇಳಿಕೊಳ್ಳಬಹುದು. ಆದರೆ, ಹೊಸಬರಿಗೆ ಪರಿಚಯ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಯಕ್ಷಗಾನ ಇನ್ನುಷ್ಟು ವಿಸ್ತಾರವಾಗಲು, ಅದರಲ್ಲಿನ ನ್ಯೂನತೆಗಳನ್ನು ಸರಿ ಮಾಡಿಕೊಳ್ಳಬೇಕು’ ಎಂದರು.

ಮೂಡುಗಿಳಿಯಾರು ಜನಸೇವಾ ಟ್ರಸ್ಟ್ನ ವಸಂತ್ ಗಿಳಿಯಾರ್, ಯಕ್ಷಗುರು ಲಂಬೋದರ ಹೆಗಡೆ, ಮಲ್ಯಾಡಿ ಸೀತಾರಾಮ ಶೆಟ್ಟಿ, ಕೋಟ ಸುದರ್ಶನ ಉರಾಳ, ಕಾರ್ಯದರ್ಶಿ ವೆಂಕಟೇಶ ವೈದ್ಯ ಇದ್ದರು.

ಹೆರಿಯ ಮಾಸ್ಟರ್ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಯಶಸ್ವೀ ಕಲಾವೃಂದದವರಿಂದ ಹೂವಿನಕೋಲು ಹಾಗೂ ಸರಯೂ ಬಾಲ ಯಕ್ಷವೃಂದ ಕೋಡಿಕಲ್ ಅವರಿಂದ ತೆಂಕುತಿಟ್ಟು ಯಕ್ಷಗಾನ ‘ಭೂಮಿ ಪುತ್ರ ಭೌಮಾಸುರ’ ಯಕ್ಷಗಾನ ಪ್ರಸಂಗದ ಪ್ರದರ್ಶನಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.