ಕಾಪು (ಪಡುಬಿದ್ರಿ): ಅತ್ತಿಂದಿತ್ತ ಓಡಾಡುವ ಜನರು, ಅವರನ್ನು ಅಟ್ಟಾಡಿಸಿಕೊಂಡು ಹೋಗುವ ಹುಲಿ ವೇಷಧಾರಿ. ಕುತೂಹಲದಿಂದ ವೀಕ್ಷಿಸುವ ಜನರು. ಶನಿವಾರ ಮಧ್ಯಾಹ್ನದಿಂದ ಸಂಜೆತನಕ ರಾಷ್ಟ್ರೀಯ ಹೆದ್ದಾರಿ 66ರ ಕಾಪುವಿನಲ್ಲಿ ಕಂಡು ಬಂದ ದೃಶ್ಯ.

ತನ್ನದೇ ವೈಶಿಷ್ಟ್ಯತೆ ಹೊಂದಿರುವ ತುಳುನಾಡಿನ ಸಪ್ತ ಜಾತ್ರೆಗಳಲ್ಲಿ ಒಂದಾಗಿರುವ ಎರಡು ವರ್ಷಗಳಿಗೊಮ್ಮೆ ನಡೆಯುವ ಕಾಪು ಬ್ರಹ್ಮಮುಗ್ಗೇರ್ಕಳ - ಪಿಲಿಚಂಡಿ ದೈವಸ್ಥಾನದಲ್ಲಿ ಎರಡು ವರ್ಷಕ್ಕೆ ಒಮ್ಮೆ ನಡೆಯುವ ಪಿಲಿಕೋಲವು ಶನಿವಾರ ಸಂಪನ್ನಗೊಂಡಿತು. ವಿವಿಧೆಡೆಯಿಂದ ಬಂದಿದ್ದ ಭಕ್ತರು ಕೋಲದಲ್ಲಿ ಪಾಲ್ಗೊಂಡು ಧನ್ಯತೆಗೆ ಮೆರೆದರು.

ಹುಲಿವೇಷ ಧರಿಸಿದ ದೈವ ನರ್ತಕ ಯಾರನ್ನು ಸ್ಪರ್ಶಿಸುತ್ತಾನೋ ಅವರು ಮುಂದಿನ ಎರಡು ವರ್ಷದೊಳಗೆ ಮರಣ ಹೊಂದುತ್ತಾರೆ ಎಂಬ ನಂಬಿಕೆ ಇಲ್ಲಿರುವ ಕಾರಣದಿಂದ ಜನರು ಎಲ್ಲ ಕೋಲಗಳಂತೆ ಇದನ್ನು ಹತ್ತಿರದಿಂದ ನೋಡುವಂತಿಲ್ಲ. ವಯೋವೃದ್ಧರು ಹಾಗೂ ಮಹಿಳೆಯರು ನಿರ್ಧಿಷ್ಟ ಸ್ಥಳದಲ್ಲಿ ನಿಂತು ಕೋಲವನ್ನು ವೀಕ್ಷಿಸಿದರು.

ರಾಷ್ಟ್ರೀಯ ಹೆದ್ದಾರಿ 66 ಹಾಗೂ ದೈವಸ್ಥಾನದ ಸುತ್ತಮುತ್ತ ಸಾವಿರಾರು ಜನ ಕೋಲ ನೋಡಲು ಜಮಾಯಿಸಿದ್ದರು. ಹುಲಿ ಸ್ಪರ್ಶಿಸಲು ಬಂದರೆ ಓಡಲು ತಾಕತ್ತಿರುವ ಯುವಜನತೆ ಹುಲಿ ಹಿಂದೆ ಹಾಗೂ ಮುಂದೆ ಓಡಿ ತಪ್ಪಿಸಿಕೊಂಡು ಸಂಭ್ರಮಿಸಿದರು. ಕೋಲಕ್ಕೆ ಪೂರ್ವಭಾವಿಯಾಗಿ ಹಲವಾರು ಸಾಂಪ್ರದಾಯಿಕ ಕ್ರಮಗಳು ಜರಗಿತು. ಮಧ್ಯಾಹ್ನದ 2.30ರ ವೇಳೆ ದೈವಸ್ಥಾನದ ಮುಂಭಾಗದಲ್ಲಿ ತೆಂಗಿನ ಎಳೆ ಗರಿಗಳಿಂದ ನಿರ್ಮಿಸಿ ಒಳಿಗುಂಡದೊಳಗೆ ಹುಲಿವೇಷದ ಬಣ್ಣಗಾರಿಕೆ ನಡೆಯಿತು.

ವೇಷ ಹಾಕುವ ಮೊದಲು ಒಳಿಗುಂಡದೊಳಗೆ ದೈವೀಕ ಆಕರ್ಷಣೆಯೊಂದಿಗೆ ಹುಲಿಯನ್ನು ಆವಾಹನೆ ಮಾಡಲಾಯಿತು. ಈ ವೇಳೆ ಒಳಿಗುಂಡ ಹಾಗೂ ಸುತ್ತಮುತ್ತ ಪ್ರವೇಶಕ್ಕೆ ಅವಕಾಶವಿರಲಿಲ್ಲ. ಬಣ್ಣಗಾರಿಕೆ ಮುಗಿದ ಬಳಿಕ ಆರ್ಭಟಿಸುತ್ತ ಒಲಿಗುಂಡದಿಂದ ಹುಲಿ ವೈಭವದಿಂದ ಹೊರ ಬಂದ ನಂತರ ಪಿಲಿಕೋಲಕ್ಕೆ ಚಾಲನೆ ದೊರೆಯಿತು. ಹುಲಿ ಭೇಟೆಗೆ ಊರು ಸಂಚಾರ ಹೊರಡಲು ಅಣಿಯಾಗುತ್ತಿದ್ದಂತೆ ಹಳೆ ಮಾರಿಗುಡಿಯ ಮುಂಭಾಗದಲ್ಲಿ ನೆಟ್ಟಿರುವ ಬಾಳೆಯ ಗರುಡಗಂಬದಲ್ಲಿ ಕಟ್ಟಿದ್ದ ಕೋಳಿಯ ರಕ್ತ ಹೀರಿದ ಕ್ಷಣ ಆರಾಧನೆಗೆ ಇನ್ನಷ್ಟು ಮೆರುಗು ನೀಡಿತು.

ಗ್ರಾಮ ಸಂಚಾರದ ಸಮಯದಲ್ಲಿ ಹಾಲು ಹಾಗೂ ಸಿಯಾಳವನ್ನು ಸೇವಿಸಿ ಹುಲಿ ದಾಹವನ್ನು ನೀಗಿಸಿಕೊಂಡಿತು. ಸಂಜೆ 6 ಗಂಟೆ ವೇಳೆ ದೈವಸ್ಥಾನಕ್ಕೆ ವಾಪಾಸ್ಸಾದ ಬಳಿಕ ಕೋಳಿ ಬಲಿ ಪಡೆದು ಸ್ನಾನ ಪೂರೈಸಿದ ನಂತರ ಪಿಲಿಕೋಲಕ್ಕೆ ತೆರೆಬಿತ್ತು.

ಪಿಲಿಕೋಲ ನಡೆಯುವ ಕಾಪು ಬ್ರಹ್ಮಮುಗ್ಗೇರ್ಕಳ - ಪಿಲಿಚಂಡಿ ದೈವಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿ ವಿನಯಕುಮಾರ್ ಸೊರಕೆ ಹಾಗೂ ಬಿಜೆಪಿ ಅಭ್ಯರ್ಥಿ ಲಾಲಾಜಿ ಆರ್.ಮೆಂಡನ್ ಭೇಟಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.