ಉಡುಪಿ: ‘ಕೇವಲ ಪತ್ರಕರ್ತ ಮಾತ್ರ ಆಗಿರದ ಪಾ.ವೆಂ.ಕವಿಯೂ ಆಗಿದ್ದರು. ವಿಜ್ಞಾನ ಸೇರಿದಂತೆ ಸಾಹಿತ್ಯದ ಎಲ್ಲ ಮಗ್ಗುಲುಗಳನ್ನೂ ಬಲ್ಲ ಅವರು ಯಾವುದೇ ಕ್ಷೇತ್ರಕ್ಕೆ ಮೀಸಲಾಗಿರದೇ ತನ್ನದೇ ಆದ ಶೈಲಿಯಿಂದ ಪತ್ರಿಕೋದ್ಯಮದಲ್ಲಿ ಹೊಸ ಛಾಪು ಮೂಡಿಸಿದ್ದರು’ ಎಂದು ಹುಬ್ಬಳ್ಳಿಯ ಉಪನ್ಯಾಸಕಿ ಸರ್ವಮಂಗಳಾ ಹೇಳಿದರು.

ಉಡುಪಿಯ ರಥಬೀದಿ ಗೆಳೆಯರು ಸಂಘಟನೆ ಮತ್ತು ಪಾವೆಂ ಆಚಾರ್ಯ ಟ್ರಸ್ಟ್ ಸಂಯುಕ್ತವಾಗಿ ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಭವಾನೀ ಮಂಟಪದಲ್ಲಿ ಶನಿವಾರ ಏರ್ಪಡಿಸಿದ್ದ ‘ಪಾ. ವೆಂ. ಆಚಾರ್ಯ ಶತಮಾನದ ಸ್ಮರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಡಂಬನೆ ಮೂಲಕ ಸಮಾಜದ ಡೊಂಕುಗಳನ್ನು ತಿದ್ದಿದರು.ಅವರ ಕವನಗಳಲ್ಲಿ ಕಾವ್ಯದ ಸತ್ವ ಕಡಿಮೆಯಾಗಿದ್ದರೂ ಲಹರಿಯ ತಾದಾತ್ಮ್ಯತೆ ಹೊಂದಿತ್ತು ಎಂದರು.

‘ಪತ್ರಕರ್ತನೊಬ್ಬ ಲೇಖಕನೊಂದಿಗೆ ಯಾವ ರೀತಿ ಸಂಬಂಧವಿರಿಸಿಕೊಳ್ಳಬೇಕು. ಲೇಖಕನ ಸಂಬಂಧವಿಲ್ಲದೇ ಯಾವ ಪತ್ರಿಕೆಯೂ ಬೆಳೆಯಲು ಸಾಧ್ಯವಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದ ಪಾ. ವೆಂ. ಕಿರಿಯ ಲೇಖಕರಿಗೂ ಮಾರ್ಗದರ್ಶಕರಾಗಿದ್ದರು’ ಎಂದು ಹಿರಿಯ ಕಲಾ ವಿಮರ್ಶಕ ಎ.ಈಶ್ವರಯ್ಯ ಹೇಳಿದರು.

ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬಿ. ವಿಜಯ ಬಲ್ಲಾಳ್, ರಥಬೀದಿ ಗೆಳೆಯರು ಸಂಘಟನೆಯ ಅಧ್ಯಕ್ಷ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡಕ, ಪಾ.ವೆಂ. ಶತಮಾನೋತ್ಸವ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಉಪಾಧ್ಯಾಯ ಬೆಂಗಳೂರು ಸೇರಿದಂತೆ ಅವರ ಅಭಿಮಾನಿಗಳು ಹಾಗೂ ಸಾಹಿತಿಗಳು ಉಪಸ್ಥಿತರಿದ್ದರು.

ಟ್ರಸ್ಟ್ ಅಧ್ಯಕ್ಷ ಪ್ರೊ. ರಾಧಾಕೃಷ್ಣ ಆಚಾರ್ಯ ಸ್ವಾಗತಿಸಿದರು. ಸುಬ್ರಹ್ಮಣ್ಯ ಜೋಶಿ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣಮೂರ್ತಿ ರಾವ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.