ಕುಮಟಾ:‘ಮುಖ್ಯಮಂತ್ರಿ ಕುಮಾರಸ್ವಾಮಿ ಕುಮಟಾಕ್ಕೆ ಬಂದಾಗ ಹೇಳಿದ್ರಂತೆ, ಮೇ 23ರ ನಂತರ ಅನಂತಕುಮಾರ ಹೆಗಡೆ ಎಲ್ಲಿರ್ತಾರಪ್ಪಾ ಅಂತ. ಈಗ ನಿಮ್ಮ ಮಗ ಮತ್ತು ಅಪ್ಪನನ್ನುಹುಡ್ಕೊಂಡು ಬನ್ನಿ’ ಎಂದುಬಿಜೆಪಿಯ ವಿಜೇತ ಅಭ್ಯರ್ಥಿಅನಂತಕುಮಾರ ಹೆಗಡೆ ವ್ಯಂಗ್ಯವಾಡಿದ್ದಾರೆ.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಗುರುವಾರ ಕಾರ್ಯಕರ್ತರ ಜತೆ ಮಾತನಾಡಿದ ಅವರು, ‘ನಾವು ಜನರ ಮಧ್ಯವೇ ಇದ್ದೇವೆ. ನಿಮ್ಮ ಮಗ ನಿಖಿಲ್ ಹಾಗೂ ನಮ್ಮ ಮಾಜಿ ಪ್ರಧಾನಿಯವರು ಎಲ್ಲಿದ್ದಾರೆ ಎಂದು ಹುಡುಕಿಕೊಂಡು ಬರಬೇಕು. ಮೇಲಿದ್ದವರು ಪಾತಾಳಕ್ಕೆ ಇಳಿಯುತ್ತಾರೆ, ಪಾತಾಳದಲ್ಲಿರುವವರು ಮತ್ತೆಲ್ಲೋ ಇರುತ್ತಾರೆ. ಇದು ಪ್ರಜಾಪ್ರಭುತ್ವದ ವೈಶಿಷ್ಟ್ಯ’ ಎಂದು ಅವರು ಹೇಳಿದರು.

‘22 ವರ್ಷಗಳಿಂದ ಉತ್ತರ ಕನ್ನಡದ ಈ ಮಣ್ಣು ಒಂದು ವಿಚಾರವನ್ನು ನಂಬಿಕೊಂಡು ಬಂದಿದೆ. ಇಷ್ಟು ಕಡಿಮೆ ಖರ್ಚಿನಲ್ಲಿ ಚುನಾವಣೆ ದೇಶದಲ್ಲಿ ಮತ್ತೆಲ್ಲೂ ನಡೆದಿಲ್ಲ. ಪಕ್ಷ ಕೊಟ್ಟಿದ್ದನ್ನು ಎಲ್ಲಾ ಕಡೆ ಕೊಡುವಪ್ರಯತ್ನ ಮಾಡಿದ್ದೇನೆ. ಬಾಕಿ ಎಲ್ಲವನ್ನೂ ಪಕ್ಷದ ಶಾಸಕರೇ ತಲೆಯ ಮೇಲೆ ತೆಗೆದುಕೊಂಡು ಮಾಡಿದ್ದಾರೆ. ಇದು ಮಾದರಿ ಚುನಾವಣೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.