ಸಿದ್ದಾಪುರ: ತಾಲ್ಲೂಕಿನ ಹಾಲು ಉತ್ಪಾದಕರ, ಸಂಘಗಳ ಹಾಗೂ ಸಂಘದ ಸಿಬ್ಬಂದಿಗೆ ಒಕ್ಕೂಟದಿಂದ ಸಿಗಬಹುದಾದ ಎಲ್ಲ ಸೌಲಭ್ಯಗಳನ್ನು ಕೊಡಿಸುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಪರಶುರಾಮ ವಿ. ನಾಯ್ಕ ಬೇಡ್ಕಣಿ ಹೇಳಿದರು.

ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಬುಧವಾರ ಮಾತನಾಡಿದರು.

ತಾಲ್ಲೂಕಿನಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಗುಣಮಟ್ಟದ ಹಾಲು ಸಂಗ್ರಹವಾಗುತ್ತಿದೆ. ಹಾಲು ಉತ್ಪಾದನೆ ಹೆಚ್ಚಿಸಲು ಆಕಳುಗಳನ್ನು ಆಸಕ್ತ ಸದಸ್ಯರು ಖರೀದಿಸುವುದಕ್ಕಾಗಿ ಧಾರವಾಡ ಹಾಲು ಒಕ್ಕೂಟದೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.

ಜಿಲ್ಲಾ ಮುಖ್ಯಸ್ಥ ಎಸ್.ಎಸ್. ಬಿಜ್ಜೂರು ಮಾತನಾಡಿದರು.

ಸಂಘದ ಸಿಬ್ಬಂದಿಗೆ ಒಕ್ಕೂಟ ಪ್ರೋತ್ಸಾಹ ಧನ ನೀಡಬೇಕು. ನೂತನ ಸಾಫ್ಟ್‌ವೇರ್ ಅಳವಡಿಸಿಕೊಳ್ಳುವುದಕ್ಕೆ ತಾಂತ್ರಿಕ ತೊಂದರೆ ಇರುವುದರಿಂದ ಅವುಗಳನ್ನು ಮೊದಲು ನಿವಾರಿಸಬೇಕು. ಸಿಬ್ಬಂದಿಗೆ ಸೂಕ್ತ ಮಾಹಿತಿ-ತರಬೇತಿ ನೀಡಬೇಕು. ಎಂದು ವಿವಿಧ ಹಾಲು ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಆಗ್ರಹಿಸಿದರು.

ಬಿಳಗಿ ಸಂಘದ ಅಧ್ಯಕ್ಷ ವಿಜಯಕುಮಾರ ಭಟ್, ಕಡಕೇರಿ ಹಾಲು ಸಂಘದ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಮಗೇಗಾರ, ಹೊಸಳ್ಳಿ ಹಾಲು ಸಂಘದ ಅಧ್ಯಕ್ಷ ನಾಗಪತಿ ನಾಯ್ಕ, ಸಹಾಯಕ ವ್ಯವಸ್ಥಾಪಕ ಡಾ.ವಿನಾಯಕ, ವಿಸ್ತರಣಾಧಿಕಾರಿ ಪ್ರಕಾಶ ಕೆ., ಚಂದನ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.