ಶಿರಸಿ: ಅಡುಗೆ ಅನಿಲ ಸಿಲಿಂಡರ್ ಪಡೆಯುವ ಗ್ರಾಹಕರ ಇ ಕೆವೈಸಿ ಅಪ್‌ಡೇಟ್ ಮಾಡಲು ಗ್ಯಾಸ್ ಏಜೆನ್ಸಿಗಳು ಮುಂದಾಗಿದ್ದು, ನಗರದ ಗ್ಯಾಸ್ ಅಂಗಡಿಗಳೆದುರು ಗ್ರಾಹಕರ ನೂಕುನುಗ್ಗಲು ಆರಂಭವಾಗಿದೆ.

ತೈಲ ಕಂಪನಿಗಳಿಂದ ಗ್ರಾಹಕರ ಇ ಕೆವೈಸಿ ಅಪ್‌ಡೇಟ್ ಮಾಡುವಂತೆ ಗ್ಯಾಸ್ ಏಜೆನ್ಸಿಗಳಿಗೆ ಸೂಚನೆ ಬಂದ ಕಾರಣ ಎಜೆನ್ಸಿಗಳು ಕ್ರಮ ವಹಿಸುತ್ತಿದ್ದು, ಗ್ರಾಹಕರ ಬೆರಳು ಗುರುತು ಮತ್ತು ಮುಖ ಚಹರೆ ಪರಿಗಣಿಸಿ ಇ ಕೆವೈಸಿ ಅಪ್‌ಡೇಟ್ ಮಾಡಲಾಗುತ್ತಿದೆ. ಹೀಗಾಗಿ ಗ್ರಾಹಕರು ಗ್ಯಾಸ್ ಅಂಗಡಿಗಳೆದುರು ಆರೇಳು ಗಂಟೆ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ.

'ಗ್ಯಾಸ್ ಏಜೆನ್ಸಿ ಕಚೇರಿಯಲ್ಲಿ ಇ ಕೆವೈಸಿ ಅಪ್‌ಡೇಟ್‌ಗೆ ವ್ಯವಸ್ಥೆ ಮಾಡಿದ್ದು, ಗ್ರಾಹಕರಿಗೆ ಸಮಸ್ಯೆಯಾಗಿದೆ. ಬೆಳಿಗ್ಗೆ ಬಂದರೆ ಸಂಜೆಯವರೆಗೆ ಕಾಯುವಂತಾಗಿದೆ. ಕುಳಿತುಕೊಳ್ಳಲು ಹಾಗೂ ನೆರಳಿನ ವ್ಯವಸ್ಥೆ ಇಲ್ಲ. ವೃದ್ದರು, ಅಂಗವಿಕಲರಿಗೆ ಇದು ತೀರಾ ಸಮಸ್ಯೆಗೆ ಕಾರಣವಾಗಿದೆ. ಮನೆಮನೆಗೆ ತೆರಳಿ ಗ್ರಾಹಕರ ಇ ಕೆವೈಸಿ ಮಾಡಿಸುವುದು ಉತ್ತಮ ಮಾರ್ಗ’ ಎಂಬುದು ಗ್ರಾಹಕ ಪರಮಾನಂದ ಹೆಗಡೆ ಅಭಿಪ್ರಾಯ.

‘ಅನಿಲ ಗ್ರಾಹಕರು ಇ ಕೆವೈಸಿ ಅಪ್‌ಡೇಟ್‌ಗಾಗಿ ಮನೆಗೆ ಸಿಲಿಂಡರ್ ನೀಡಲು ಬರುವ ಡೆಲಿವರಿ ಬಾಯ್‌ಗಳನ್ನು ಸಂಪರ್ಕಿಸಿದರೆ ಅವರೇ ತಮ್ಮ ಮೊಬೈಲ್‌ನಲ್ಲಿ ಇ ಕೆವೈಸಿ ದಾಖಲಿಸಿಕೊಳ್ಳಲಿದ್ದಾರೆ. ಇಲ್ಲವಾದರೆ ಗ್ಯಾಸ್ ಏಜೆನ್ಸಿಯ ಕಚೇರಿಗೆ ಬಂದರೆ ಸಿಬ್ಬಂದಿ ಬೆರಳಚ್ಚು ಅಥವಾ ಮುಖದ ಚಿತ್ರ ತೆಗೆದುಕೊಳ್ಳುವ ಮೂಲಕ ಇಕೆವೈಸಿ ಅಪ್‌ಡೇಟ್ ಮಾಡಿಕೊಳ್ಳಲಿದ್ದಾರೆ. ಈವರೆಗೂ ಅಂತಿಮ ದಿನಾಂಕ ಗೊತ್ತುಪಡಿಸಿಲ್ಲ. ಜನರು ಆತಂಕಪಡುವ ಅಗತ್ಯವಿಲ್ಲ’ ಎಂಬುದು ನಗರದ ಗ್ಯಾಸ್ ಎಜೆನ್ಸಿಯೊಂದರ ಮಾಲಿಕ ರಾಘವೇಂದ್ರ ಮಾತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.