ಕುಮಟಾ: ಸಾಮಾನ್ಯವಾಗಿ ಎಲ್ಲರೂ ಮೀನು ತಿನ್ನುವ ದಿನವಾದ ಭಾನುವಾರ ಕುಮಟಾ ಮೀನು ಮಾರುಕಟ್ಟೆಯಲ್ಲಿ ದೊಡ್ಡ ಗಾತ್ರದ, ಹಸಿರು ಬಣ್ಣದ, ಮಿಂಚುವ ತಾಜಾ ಬಂಗಡೆ ಮೀನು ಹೇರಳ ಪ್ರಮಾಣದಲ್ಲಿ ಮಾರಾಟವಾಗಿದೆ.

ನಾಲ್ಕು ದಿವಸಗಳಿಂದ ಮಳೆಯ ವಾತಾವರಣವಿದ್ದ ಕಾರಣ ಹೆಚ್ಚಿನ ಮೀನುಗಾರರು ಅಪಾಯ ಎದುರಿಸಿ ಸಮುದ್ರಕ್ಕಿಳಿದಿರಲಿಲ್ಲ. ಆದರೆ ಭಾನುವಾರ ಹೆಚ್ಚಿನ ಪ್ರಮಾಣದಲ್ಲಿ ಮೀನು ಮಾರಾಟವಾಗುವುದರಿಂದ ಸಮುದ್ರದ ಅಪಾಯ ಎದುರಿಸಿ ಮೀನುಗಾರರು ದೋಣಿಗಳನ್ನು ನೀರಿಗಿಳಿಸಿದ್ದರು.

ಭಾನುವಾರ ಹೇರಳ ಪ್ರಮಾಣದಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟ ದೊಡ್ಡ ಗಾತ್ರದ ಹಸಿರು ಬಣ್ಣದ ಮಿಂಚುವ ಬಂಗಡೆ ಮೀನಿನದೇ ಪಾರುಪತ್ಯವಾಯಿತು. ಬಂಗಡೆ ಮೀನು ಬೆಳಿಗ್ಗೆ ₹100ಕ್ಕೆ 12 ರಂತೆ ಮಾರಾಟವಾದವು. ಇದರ ಜೊತೆ ದೊಡ್ಡ ಗಾತ್ರದ ಸಮದಾಳೆ ₹100ಕ್ಕೆ 10-12, ದೊಡ್ಡ ಗಾತ್ರದ 10-15 ಇರುವ ದೋಡಿ ಮೀನಿನ ಪಾಲು ಕೇವಲ ₹100 ಕ್ಕೆ ಮಾರಾಟವಾಗಿದೆ.

ಉಳಿದ ದಿವಸಗಳಲ್ಲಿ ₹100ಕ್ಕೆ 7-8 ಪ್ರಮಾಣದಲ್ಲಿ ಚಿಕ್ಕ ಗಾತ್ರದ ಬಂಗಡೆ ಮೀನು ಮಾರಾಟವಾಗುತ್ತಿದ್ದವು. ಚಿಕ್ಕ ಗಾತ್ರದ ಸಮದಾಳೆ ಮೀನು ₹100ಕ್ಕೆ 6-7 ರಂತೆ ಮಾರಾಟವಾಗುತ್ತಿದ್ದವು. 10-12 ಇರುವ ಚಿಕ್ಕ ಗಾತ್ರದ ದೋಡಿ ಮೀನಿನ ( ಬಣಗು) ಪಾಲಿಗೆ ₹100 ಎನ್ನುತ್ತಿದ್ದರು. ಸಾಧಾರಣ ಗಾತ್ರದ ಕರಳಗಿ ಮೀನಿನ ಜೋಡಿಗೆ ₹300, ದೊಡ್ಡ ಗಾತ್ರದ ತೋರಿ ಮೀನು ₹ 100ಕ್ಕೆ 6-7 ರಂತೆ ಮಾರಾಟವಾದರೆ, ಚಿಕ್ಕ ತೋರಿ ಮೀನಿನ ಒಂದು ಪಾಲಿಗೆ ₹100 ದರ ಇತ್ತು. ಬೆಳ್ಳಂಜಿ ಮೀನಿನ ಒಂದು ಚಿಕ್ಕ ಪಾಲಿಗೆ ₹ 100, ನೂರು ಬೆಳ್ಳಂಜಿಗೆ ₹200 ರಿಂದ ₹300 ದರ ಇತ್ತು. ರುಚಿಕರ ಹಾಗೂ ದುಬಾರಿಯಾದ ಇಶೋಣ, ಪಾಟ್ಲೆಟ್ ಮೀನಂತೂ ವಾರದಿಂದ ಮಾರುಕಟ್ಟೆಯಲ್ಲಿ ಕಾಣದೆ ನಾಪತ್ತೆಯಾದಂತಿದ್ದವು.

ನಾಡದೋಣಿ ಹಾಗೂ ಸಾಂಪ್ರದಾಯಿಕ ಮೀನುಗಾರರ ಸಂಘದ ತಾಲ್ಲೂಕು ಅಧ್ಯಕ್ಷ ಸುಧಾಕರ ತಾರಿ ಮಾತನಾಡಿ, ‘ಮೀನುಗಳ ಚಲನ ವಲನದ ಬಗ್ಗೆ ನಮ್ಮ ತಿಳಿವಳಿಕೆ ಕೂಡ ಈಗ ಬದಲಾಗಬೇಕಿದೆ. ಎಂಥ ವಾತಾವರಣದಲ್ಲಿ ಯಾವ ಕಡೆ ತಿರುಗುತ್ತವೆ ಎಂದು ಮೀನಿನ ಹೆಜ್ಜೆ ಗುರುತು ಹಿಡಿಯುವುದೂ ಈಗಿನ ದಿನದಲ್ಲಿ ಕಷ್ಟಕರವಾಗಿದೆ’ ಎಂದರು.

‘ಈ ವರ್ಷ ದೊಡ್ಡ ಪ್ರಮಾಣದಲ್ಲಿ ದೊಡ್ಡ ಗಾತ್ರದ ಮೀನು ಇಷ್ಟು ಸೋವಿ ( ಕಡಿಮೆ ದರ) ಆಗಿದ್ದು ಇದೇ ಮೊದಲ ಸಲ ಇರಬಹುದು’ ಎಂದು ಮೀನು ಮಾರಾಟ ವ್ಯಾಪಾರಿ ಕುಸುಮಾ ಅಂಬಿಗ ಮಾಹಿತಿ ನೀಡಿದರು.

ಸಮುದ್ರದಲ್ಲಿ ಅಲೆಗಳ ಅಬ್ಬರ ಇರುವಾಗಲೇ ಭಾನುವಾರ ಇಷ್ಟೊಂದು ಪ್ರಮಾಣದ ಒಳ್ಳೊಳ್ಳೆ ಮೀನು ಸಿಕ್ಕಿರುವುದು ನಮಗೂ ಅಚ್ಚರಿಯ ಸಂಗತಿ.
-ಸುಧಾಕರ ತಾರಿ, ನಾಡದೋಣಿ, ಸಾಂಪ್ರದಾಯಿಕ ಮೀನುಗಾರರ ಸಂಘದ ತಾಲ್ಲೂಕು ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.